ಟ್ಯಾಲೆಂಟ್ ವತಿಯಿಂದ ಉಚಿತ ಹೊಲಿಗೆ ಯಂತ್ರ ಮತ್ತು ವೀಲ್ ಚಯರ್ ವಿತರಣೆ

Update: 2017-04-22 14:07 GMT

ಮಂಗಳೂರು,ಎ.22: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಹಾಗೂ ವಿಕಲಚೇತನರಿಗೆ ವೀಲ್ ಚಯರ್ (ಗಾಲಿ ಕುರ್ಚಿ)ಗಳನ್ನು ಉಚಿತವಾಗಿ ವಿತರಿಸಲಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿಯೊಂದಿಗೆ ರೇಷನ್ ಕಾರ್ಡ್ ಲಗತ್ತಿಸಿ ಎಪ್ರಿಲ್ 29 ರೊಳಗೆ ಸಂಸ್ಥೆಯ ಕಛೇರಿಗೆ ಸಲ್ಲಿಸುವುದು. ಅತ್ಯಂತ ಅರ್ಹರಿಗೆ ಸವಲತ್ತುಗಳು ದೊರಕುವಂತಾಗಲು ಸರ್ವೆ ನಡೆಸಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ದೂರವಾಣಿ: 0824-4267883, 7760508664 ನ್ನು ಸಂಪರ್ಕಿಸುವಂತೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News