ಪಟ್ಲ ಸತೀಶ್ ಶೆಟ್ಟಿಗೆ ‘ಗಾನಕೋಗಿಲೆ’ ಪ್ರಶಸ್ತಿ ಪ್ರದಾನ
Update: 2017-04-22 22:08 IST
ಉಡುಪಿ, ಎ.22: ಇನ್ನಂಜೆಯಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನದ ಸಭಾ ವೇದಿಕೆಯಲ್ಲಿ ಯಕ್ಷಗಾನದ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಭಾಗವತ ಪಟ್ಲ ಸತೀಶ ಶೆಟ್ಟಿ ಅವರಿಗೆ ‘ಗಾನಕೋಗಿಲೆ’ ಪ್ರಶಸ್ತಿ ಪ್ರದಾನ ಮಾಡಿದರು. ಸನ್ಮಾನ ಸ್ವೀಕರಿಸಿದ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನವು ನನಗೆ ಎಲ್ಲಾ ರೀತಿಯ ಸ್ಥಾನಮಾನ ಗೌರವ ತಂದುಕೊಟ್ಟಿದೆ. ನಾನು ಯಕ್ಷಗಾನ ಕಲಾವಿದರಿಗಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಇದರ ಮೂಲಕ ಸರ್ವ ಕಲಾವಿದರಿಗೂ ನೆರವು ನೀಡುವುದಾಗಿ ತಿಳಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಡಾ.ಕೊಳ್ಯೂರು ರಾಮಚಂದ್ರ ರಾವ್, ಭಾರತಿ, ಶ್ರೀಧರ್ ರಾವ್ ಮಣಿಪಾಲ ಉಪಸ್ಥಿತರಿದ್ದರು. ನಂದಕುಮಾರ್ ಇನ್ನಂಜೆ ಕಾರ್ಯಕ್ರಮ ನಿರೂಪಿಸಿದರು.