ಬೆಳ್ತಂಗಡಿ : ಮನೆಯೊಂದರಿಂದ ನಗ,ನಗದು ಕಳವು
Update: 2017-04-22 22:25 IST
ಬೆಳ್ತಂಗಡಿ,ಎ.22: ಮನೆಯೊಂದರಿಂದ ನಗ,ನಗದು ದೋಚಿದ ಘಟನೆ ವೇಣೂರು ಸನಿಹದ ಉಳ್ತೂರು ಎಂಬಲ್ಲಿ ಎರಡು ದಿನಗಳ ಹಿಂದೆ ನಡೆದಿದೆ.
ಉಳ್ತೂರು ಬೊಳ್ಜಾಲು ನಿವಾಸಿ ಸರೋಜ ಅವರ ಮನೆಯ ಹಿಂಬದಿಯ ಬಾಗಿಲು ಮುರಿದು ಕಳ್ಳರು ಈ ಕೃತ್ಯವೆಸಗಿದ್ದಾರೆ. ಸರೋಜ ಅವರು ತನ್ನ ಮೂವರು ಮಕ್ಕಳೊಂದಿಗೆ ಸಹೋದರಿಯ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳಿದ್ದರು. ಎರಡು ದಿನದ ಬಳಿಕ ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯ ಹಿಂಬದಿಯ ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 2 ಚಿನ್ನದ ಬಲೆ, ಚೈನ್ ಹಾಗೂ ರೂ. 20,000 ನಗದನ್ನು ದೋಚಿದ್ದಾರೆ. ಚಿನ್ನಾಭರಣ ಸೇರಿ ಕಳವಾದ ಒಟ್ಟು ಮೌಲ್ಯ ರೂ. 60,000 ಎಂದು ಅಂದಾಜಿಸಲಾಗಿದ್ದು, ವೇಣೂರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.