ಬಲ್ಲೂರು ಗುಡ್ಡೆ: ನಾಳೆ ಸಲಫಿ ಸಮಾವೇಶ
Update: 2017-04-22 23:44 IST
ಮಂಗಳೂರು, ಎ.22: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್ಕೆಎಸ್ಸೆಮ್ ಅಡ್ಯಾರ್ ಕಣ್ಣೂರು ಘಟಕದ ವತಿಯಿಂದ ಎ.24ರಂದು ಸಂಜೆ 5ಕ್ಕೆ ಬಲ್ಲೂರುಗುಡ್ಡೆಯಲ್ಲಿ ಸಲಫಿ ಸಮಾವೇಶ ಜರಗಲಿದೆ.
ಕಣ್ಣೂರು ಸಲಫಿ ಮಸೀದಿಯ ಖತೀಬ್ ಮೌಲವಿ ಮುಹಮ್ಮದ್ ರಫೀಕ್ ಖಾಸಿಮಿ ಮತ್ತು ಚುಯ್ಯೆಲಿ ಅಬ್ದುಲ್ಲಾ ಮುಸ್ಲಿಯಾರ್ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.