ಮಂಗಳೂರು ವಿವಿ: ಪದವಿಯಲ್ಲಿ ಅರೇಬಿಕ್ ಕಲಿಕೆಗೆ ಅನುಮತಿ

Update: 2017-04-22 18:27 GMT

ಮಂಗಳೂರು, ಎ.22: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ 2017-18ನೆ ಶೈಕ್ಷಣಿಕ ಸಾಲಿನಿಂದ ಅರೇಬಿಕ್ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಕಲಿ ಯಲು ಅವಕಾಶ ನೀಡಲಾಗಿದೆ.

ಮಾ.21ರಂದು ಬಡೆದ ಅಕಾಡಮಿಕ್ ಕೌನ್ಸಿಲ್ ಸಭೆಯಲ್ಲಿ ಅರೇಬಿಕ್ ಭಾಷೆಯನ್ನು ಕಲಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಅರೇಬಿಕ್ ಭಾಷೆ ಕಲಿಕೆಗೆ ಅನುಮತಿ ನೀಡಿದೆ. ಜೆತೆಗೆ ಅರೇಬಿಕ್‌ನಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೆಟ್ ಕೋರ್ಸ್‌ಗೂ ವಿವಿ ಅನುಮತಿ ನೀಡಿದ್ದು, ಈಗಾಗಲೇ 3 ಶಿಕ್ಷಣ ಸಂಸ್ಥೆಗಳು ಅರೇಬಿಕ್ ಭಾಷೆ ಕಲಿಕೆಗೆ ಅರ್ಜಿ ಸಲ್ಲಿಸಿದೆ. ಭವಿಷ್ಯದಲ್ಲಿ ಮತ್ತಷ್ಟು ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News