ದಡ್ಡಲಕಾಡು ವಿದ್ಯಾದೇಗುಲ ಲೋಕಾರ್ಪಣೆ

Update: 2017-04-22 18:28 GMT

ಬಂಟ್ವಾಳ, ಎ.22: ಇಂದು ವಿಶ್ವ ಭೂ ದಿನ ಆಚರಿಸುತ್ತಿರುವ ಈ ಸಂದ ರ್ಭದಲ್ಲಿ ಶಾಲೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುವ ಮೂಲಕ ದುರ್ಗಾ ಫ್ರೆಂಡ್ಸ್ ಕ್ಲಬ್ ಮಣ್ಣಿನ ಋಣ ತೀರಿಸಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

ಮೂಡನಡು ಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್‌ನ ದಶಮಾನೋತ್ಸವದ ಅಂಗವಾಗಿ ಶನಿವಾರ ಸಂಜೆ ದಡ್ಡಲಕಾಡು ವಿದ್ಯಾದೇಗುಲವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳ ವಿಸ್ತತ ಅಧ್ಯಯನ ವರದಿ ತಯಾರಿಸಿ ಕೊಟ್ಟರೆ ಆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವೆ. ಪ್ರಧಾನ ಮಂತ್ರಿಯವರ ಗಮನವನ್ನು ಸೆಳೆಯವುದಾಗಿ ಭರವಸೆ ನೀಡಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ ಶುಭ ಹಾರೈಸಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ರಾಜಸ್ಥಾನದ ಮೋಹನ್ ಚೌದರಿ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸೇಸಪ್ಪಕೋಟ್ಯಾನ್, ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸಿ.ಲೋಕೇಶ್, ಶಿಕ್ಷಕ ಸಂಜೀವ ಗೌಡ, ಕೆನರಾ ಬ್ಯಾಂಕ್‌ನ ಪ್ರಬಂಧಕ ಮನೋಹರ ನಾಯಕ್, ಲೀಲಾಕ್ಷ ಕರ್ಕೇರ, ಲಕ್ಷ್ಮೀನಾರಾಯಣ ಗೌಡ, ಕೇಶವ ಗೌಡ, ಪೂವಪ್ಪಮೆಂಡನ್, ಬಶೀರ್ ಅಹ್ಮದ್, ರೂಪಶ್ರೀ ಗಂಗಾಧರ್, ವೌರಿಸ್ ಡಿಸೋಜ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News