ಯುವ ‘ಕನಸುಗಾರ’ರನ್ನು ಗಡಿಪಾರು ಮಾಡುವುದಿಲ್ಲ: ಟ್ರಂಪ್

Update: 2017-04-23 14:26 GMT

ವಾಶಿಂಗ್ಟನ್, ಎ. 23: ಮಕ್ಕಳಿರುವಾಗ ಅಮೆರಿಕಕ್ಕೆ ಬಂದು ಈಗ ಅಕ್ರಮವಾಗಿ ನೆಲೆಸಿರುವ ಯುವ ವಲಸಿಗರು ದೇಶದಲ್ಲಿ ಆರಾಮವಾಗಿ ಇರಬಹುದಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಕನಸುಗಳನ್ನು ಹುಡುಕುತ್ತಾ ಅಮೆರಿಕಕ್ಕೆ ಬಂದವರನ್ನು’ ತನ್ನ ವಲಸೆ ನೀತಿಗಳ ಅಡಿಯಲ್ಲಿ ಗಡಿಪಾರು ಮಾಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ತನ್ನ ಆಡಳಿತವು ‘‘ಕನಸುಗಾರರನ್ನು ಗುರಿಯಾಗಿಸಿಲ್ಲ, ಕ್ರಿಮಿನಲ್‌ಗಳನ್ನು ಗುರಿಯಾಗಿಸಿದೆ’’ ಎಂದು ಶುಕ್ರವಾರ ‘ಅಸೋಸಿಯೇಟಡ್ ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಅದೇ ವೇಳೆ, ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆಯನ್ನು ನಿರ್ಮಿಸುವ ತನ್ನ ಭರವಸೆಯನ್ನು ಈಡೇರಿಸುವುದಾಗಿ ಅವರು ಮತ್ತೊಮ್ಮೆ ಪಣತೊಟ್ಟರು.
ಅಧಿಕಾರಕ್ಕೆ ಬಂದ ಮೊದಲ 100 ದಿನಕ್ಕೆ ಪೂರ್ವಭಾವಿಯಾಗಿ ಅವರು ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News