ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ: ಇಬ್ಬರ ಬಂಧನ
Update: 2017-04-23 21:03 IST
ಪಡುಬಿದ್ರೆ, ಎ.23: ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಅಂಗಡಿಗೆ ನುಗ್ಗಿ ವ್ಯಕ್ತಿಯೋರ್ವನಿಗೆ ಮೂವರ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಡುಬಿದ್ರೆ ಠಾಣಾ ವ್ಯಾಪ್ತಿಯ ಕಂಚಿನಡ್ಕ ಎಂಬಲ್ಲಿ ನಡೆದಿದೆ.
ಕಂಚಿನಡ್ಕದ ಲಚ್ಚಿಲ್ ನಿವಾಸಿ ನಿಯಾಝ್ ಕೌಸಲ್ ಎಂಬವರು ಹಲ್ಲೆಗೊಳಗಾಗಿದ್ದು, ಹಲ್ಲೆ ನಡೆಸಿದ್ದಾರೆನ್ನಲಾದ ಮುಹಮ್ಮದ್ ರಜೀನ್(29), ಅಬ್ದುಲ್ ರಹಿಮಾನ್(48) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿ ಇಮ್ರಾನ್ ಪರಾರಿಯಾಗಿದ್ದಾನೆ.
ನಿಯಾರ್ ಕಂಚಿನಡ್ಕದಲ್ಲಿ ತನ್ನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಏಕಾಏಕಿ ಅಂಗಡಿಗೆ ನುಗ್ಗಿ ಹಣ ಯಾವಾಗ ಕೊಡುತ್ತೀಯಾ ಎಂದು ಬೆದರಿಸಿ ಚೂರಿಯಿಂದ ಇರಿದಿದ್ದಾರೆ. ಈ ವೇಳೆ ನಿಯಾಝ್ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಮಾರಣಾಂತಿಕ ಹಲ್ಲೆ, ಕೊಲೆ ಪ್ರಯತ್ನ ಸಹಿತ ವಿವಿಧ ಪ್ರಕರಣ ಪಡುಬಿದ್ರೆ ಠಾಣೆಯಲ್ಲಿ ದಾಖಲಾಗಿದೆ.