×
Ad

​ಜಗದೀಶ್ ಸುವರ್ಣರದ್ದು ಕೊಲೆಯಲ್ಲ: ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತು

Update: 2017-04-23 21:14 IST

ಮಂಗಳೂರು, ಎ.23: ನಗರದ ಹೊರ ವಲಯದ ಬೆಂಗರೆ ನದಿ ತೀರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಬೆಂಗ್ರೆಯ ಸ್ಯಾಂಡ್‌ಪಿಟ್ ನಿವಾಸಿ ಜಗದೀಶ್ ಸುವರ್ಣ (37) ಎಂಬವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಯಲ್ಲಿ ಇದು ಕೊಲೆಯಲ್ಲ ಎಂಬುದು ಸಾಬೀತಾಗಿದೆ.

ಬಜರಂಗದಳದ ಕಾರ್ಯಕರ್ತರೆನ್ನಲಾದ ಜಗದೀಶ್ ಸುವರ್ಣ ಅವರ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಬೆಂಗರೆಯ ನದಿ ತೀರದಲ್ಲಿ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಕೊಲೆ ಶಂಕೆ ವ್ಯಕ್ತವಾಗಿತ್ತು. ಗುರುವಾರ ರಾತ್ರಿ ಬೆಂಗ್ರೆ ಮನೆಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದ ಜಗದೀಶ್, ರಾತ್ರಿ 3 ಗಂಟೆಯವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ತಾನು ಕೆಲಸ ಮಾಡುತ್ತಿದ್ದ ಬೋಟ್‌ನತ್ತ ತೆರಳಿದ್ದರೆಂದು ಹೇಳಲಾಗಿದ್ದು, ಮಾರನೆ ದಿನ ಬೆಂಗರೆ ನದಿ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ನದಿ ತೀರದಲ್ಲಿ ಹೋಗುವಾಗ ಕಾಲು ಜಾರಿ ಬಿದ್ದಿರಬೇಕೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಆಧಾರದಲ್ಲಿ ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News