ಟಿಸಿಎಸ್, ಇನ್‌ಫೋಸಿಸ್‌ನಿಂದ ಎಚ್-1ಬಿ ವೀಸಾ ನಿಯಮ ಉಲ್ಲಂಘಟನೆ

Update: 2017-04-23 16:11 GMT

ವಾಶಿಂಗ್ಟನ್, ಎ. 23: ಲಾಟರಿ ವ್ಯವಸ್ಥೆಯಲ್ಲಿ ಹೆಚ್ಚುವರಿ ಟಿಕೆಟ್‌ಗಳನ್ನು ಹಾಕುವ ಮೂಲಕ ಎಚ್-1ಬಿ ವೀಸಾಗಳ ಸಿಂಹ ಪಾಲನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳಾದ ಟಿಸಿಎಸ್ ಮತ್ತು ಇನ್‌ಫೋಸಿಸ್ ಪಡೆದುಕೊಳ್ಳುತ್ತಿವೆ ಎಂದು ಅಮೆರಿಕ ಆರೋಪಿಸಿದೆ.

ಕೆಲವೇ ಕೆಲವು ಬೃಹತ್ ಪರಭಾರೆ ಕಂಪೆನಿಗಳು ಅರ್ಜಿಗಳ ಮಹಾಪೂರವನ್ನೇ ಹರಿಸುತ್ತವೆ ಹಾಗೂ ಇದರಿಂದ ಸಹಜವಾಗಿಯೇ ಲಾಟರಿ ವ್ಯವಸ್ಥೆಯಲ್ಲಿ ಅವುಗಳ ಯಶಸ್ಸಿನ ಪಾಲು ಹೆಚ್ಚಾಗಿರುತ್ತದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಕಳೆದ ವಾರ ಶ್ವೇತಭವನಕ್ಕೆ ಮಾಹಿತಿ ನೀಡಿದ್ದಾರೆ.

‘‘ಟಾಟಾ, ಇನ್‌ಫೋಸಿಸ್, ಕಾಗ್ನಿಝಂಟ್ ಮುಂತಾದ ಕಂಪೆನಿಗಳು ತಮಗೆ ಸಿಗುವ ವೀಸಾಗಳಿಗಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸುತ್ತವೆ. ಹಾಗಾಗಿ, ಅವುಗಳಿಗೆ ಹೆಚ್ಚಿನ ವೀಸಾಗಳು ಸಿಗುತ್ತವೆ’’ ಎಂದು ಹಿರಿಯ ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News