×
Ad

ಮಾನವೀಯತೆ ಮೆರೆದ ಶಾಸಕ ಮೊಯ್ದಿನ್ ಬಾವ

Update: 2017-04-23 22:52 IST

ಮಂಗಳೂರು, ಎ.23: ಮಂಗಳೂರು ಉತ್ತರ ಕ್ಷೇತ್ರದ ಕೋಡಿಕಲ್ ಕುರುವಾಂಬ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ ಬಾಲಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ನಡೆದಿದೆ. 

ಎನ್.ಎಂ.ಪಿ.ಟಿ. ಶಾಲೆಯ 10ನೆ ತರಗತಿಯ ವಿದ್ಯಾರ್ಥಿ ವಿಘ್ನೇಶ್ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದ. ಈ ವಿಚಾರ ತಿಳಿದು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಮೊಯ್ದಿನ್ ಬಾವ ಮರಣೋತ್ತರ ಪರೀಕ್ಷೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಬಾಲಕನ ಪೋಷಕರು ಬೆಂಗಳೂರಲ್ಲಿದ್ದು, ತುತಾ೯ಗಿ ಮಂಗಳೂರಿಗೆ ಆಗಮಿಸಲು ವಿಮಾನದ ಟಿಕೆಟ್ ಮೊತ್ತವನ್ನೂ ಮೊಯ್ದಿನ್ ಬಾವ ಅವರೇ ಪಾವತಿಸಿದರು. 

ಶಾಸಕರ ಈ ತುತು೯ ಸ್ಪಂದನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕಾಪೋ೯ರೇಟರ್ ಶಶಿಧರ ಹೆಗ್ಡೆ, ಕೇಶವ ಸನಿಲ್, ದೇವಸ್ಥಾನ ಸಮಿತಿ ಅಧ್ಯಕ್ಷ ಭಾಸ್ಕರ ಮತ್ತಿತರರು ನೆರವು ನೀಡುವಲ್ಲಿ ಕೈಜೋಡಿಸಿದ್ದರು.

ಮುಗಿಲುಮುಟ್ಟಿದ ಆಕ್ರಂದನ: ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ವಿಘ್ನೇಶ್ ನ ಅಂತ್ಯಸಂಸ್ಕಾರ ರಾತ್ರಿಯೇ ನೆರವೇರಿದ್ದು, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News