ಪುಸ್ತಕ ಓದುವುದರಿಂದ ಮನಸ್ಸು ಸಂತಸ: ಅಶೋಕ್‌ಕುಮಾರ್
ಮಂಗಳೂರು, ಎ.23: ಪುಸ್ತಕ ಓದುವುದರಿಂದ ಏಕಾಗ್ರತೆ ಹೆಚ್ಚುವುದರ ಜೊತೆಗೆ ತಾಳ್ಮೆಯೂ ಆವರಿಸುತ್ತದೆ. ಪುಸ್ತಕಗಳು ಜ್ಞಾನ ಬೆಳೆಸುವುದರ ಜೊತೆಗೆ ನಮ್ಮ ಮನಸ್ಸು ಸಂತಸದಿಂದಿರುವಂತೆ ಮಾಡುತ್ತದೆ. ಹಾಗಾಗಿ ದಿನನಿತ್ಯ ಪುಸ್ತಕ ಅಥವಾ ದಿನಪತ್ರಿಕೆಗಳನ್ನಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕಾಸರಗೋಡು ಅಶೋಕ್ ಕುಮಾರ್ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮಂಗಳೂರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಹಯೋಗದಲ್ಲಿ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಅಲ್ ರಹಬಾ ಪ್ಲಾಝಾದ ಪ್ರಾಧಿಕಾರದ ಮಳಿಗೆಯಲ್ಲಿ ರವಿವಾರ ನಡೆದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸಾಹಿತಿಗೆ ನಿರಂತರ ಓದು ಅಗತ್ಯ. ಆದರೆ ಇಂದು ಕೆಲವು ಮಂದಿ ಸ್ವಲ್ಪ ಓದಿ ಪ್ರಖ್ಯಾತ ಸಾಹಿತಿಗಳಾಗಲು ಪ್ರಯತ್ನಿಸುತ್ತಾರೆ. ಇಂತಹ ನಿಲುವಿನಿಂದ ಹೊರಬರುವುದು ಅಗತ್ಯ. ಪುಸ್ತಕಗಳು ನಮಗೆ ಎಂದೆಂದಿಗೂ ಮಾರ್ಗದರ್ಶಕ ಎಂಬ ಅರಿವು ನಮ್ಮಲ್ಲಿರಬೇಕು ಎಂದು ಅಶೋಕ್ ಕುಮಾರ್ ನುಡಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಡಾ. ಬಿ.ದೇವದಾಸ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಡೆದ ಗೋಷ್ಠಿಯಲ್ಲಿ ಕವಿಗಳಾದ ವ್ನಿೇಶ್ ಭಿಡೆ, ಜೆ.ಎ್.ಡಿಸೋಜ, ಡಾ. ಸುರೇಶ್ ನೆಗಳಗುಳಿ, ತಾರಾನಾಥ್ ಬೋಳಾರ್, ಮಾಲತಿ ಶೆಟ್ಟಿ ಮಾಣೂರು, ಗುಣವತಿ ಕಿನ್ಯಾ, ಚಂದ್ರಶೇಖರ್ ಬೋಳಾರ್ ಚುಟುಕುಗಳನ್ನು ವಾಚಿಸಿದರು.
ಪುಸ್ತಕ ಮಾರಾಟ ಮಳಿಗೆಯ ಪ್ರತಿನಿಧಿ ಮಾರ್ಸೆಲ್ ಎಂ.ಡಿಸೋಜ ಸ್ವಾಗತಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.