‘ಪ್ರಸ್ತುತ’ದಿಂದ ಮಾಧ್ಯಮ ಕಾರ್ಯಾಗಾರ
Update: 2017-04-23 23:56 IST
ಮಂಗಳೂರು, ಎ.23: ಪ್ರಸ್ತುತ ಪಾಕ್ಷಿಕದ ವತಿಯಿಂದ ಉದಯೋನ್ಮುಖ ಬರಹಗಾರರಿಗಾಗಿ ಏಕದಿನ ಮಾಧ್ಯಮ ಕಾರ್ಯಾಗಾರವನ್ನು ಶನಿವಾರ ನಗರದ ಬದ್ರಿಯಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗೃತಿ ಹಾಗೂ ಪರಿಣಾಮಕಾರಿ ಬಳಕೆಯ ಕುರಿತು ರಹೀಂ ಬೆಂಗಳೂರು ತರಗತಿ ನಡೆಸಿಕೊಟ್ಟರು. ‘ಪತ್ರಿಕೋದ್ಯಮದ ನೈತಿಕತೆ’ ಎಂಬ ವಿಷಯದಲ್ಲಿ ಪತ್ರಕರ್ತ ಆರಿಫ್ ಪಡುಬಿದ್ರೆ ಮತ್ತು ‘ಬರೆಯುವುದು ಹೇಗೆ’ ಎಂಬ ವಿಷಯದಲ್ಲಿ ಪ್ರಸ್ತುತ ಮಾಜಿ ಸಂಪಾದಕ ಫಯಾಝ್ ಎನ್.ತರಗತಿ ನಡೆಸಿಕೊಟ್ಟರು.
ಇದೇ ವೇಳೆ ಪ್ರಸ್ತುತ ಪಾಕ್ಷಿಕದ ವಾಟ್ಸ್ ಆ್ಯಪ್ ಸಂಖ್ಯೆ(8762770454)ಗೆ ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಚಾಲನೆ ನೀಡಿದರು. ತುಫೈಲ್ ಆತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಪಾಕ್ಷಿಕದ ಸಂಪಾದಕ ಝಿಯಾವುಲ್ ಹಖ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.