ಸವಣೂರಿನಲ್ಲಿ ‘ತೆಲಿಕೆ-ಕಲಿಕೆ-ನಲಿಕೆ’ ಬೇಸಿಗೆ ಶಿಬಿರ

Update: 2017-04-23 18:30 GMT

ಪುತ್ತೂರು, ಎ.23: ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಕುರಿತು ಆಸಕ್ತಿ ಮೂಡಿಸಲು ಸಹಕಾರಿ ಎಂದು ಸುಳ್ಯ ಪ್ರಜ್ಞಾ ಎಜುಕೇಶನ್ ಟ್ರಸ್ಟ್‌ನ ಸಂಚಾಲಕ ಶಶಿಧರ ಕೊಯ್ಕುಳಿ ಹೇಳಿದರು.

 ಅವರು ಜೆಸಿಐ ಸವಣೂರು, ಸವಣೂರು ಯುವಕ ಮಂಡಲ ಆಶ್ರಯದಲ್ಲಿ ಸವಣೂರು ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಎ.15ರಿಂದ 23ರ ತನಕ ನಡೆದ ತೆಲಿಕೆ-ಕಲಿಕೆ-ನಲಿಕೆ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುವ ಗಾಯಕಿ ಲಹರಿ ಕೋಟ್ಯಾನ್‌ರನ್ನು ಸನ್ಮಾನಿಸಲಾಯಿತು.

ಸವಣೂರು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಿದ್ದರು.

ಸವಣೂರು ಪ.ಪೂ. ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ್ ಸುಲಾಯ, ಪ್ರವೀಣ್ ಕುಂಟ್ಯಾನ, ಸವಣೂರು ಚಂದ್ರಶೇಖರ್ ಮೆದು, ರಾಜರಾಮ ಪ್ರಭು, ಸಚಿನ್ ಎಸ್, ಸುಬ್ರಹ್ಮಣ್ಯ, ದಯಾನಂದ ಮೆದು, ಚೈತ್ರಾ, ಪ್ರೇಮಾ ಎಸ್.ಎಂ., ಉದಯ ಬಿ.ಆರ್. ಉಪಸ್ಥಿತರಿದ್ದರು. ಕೃಷ್ಣಪ್ಪಬಂಬಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರವೀಣ್ ಚೆನ್ನಾವರ ಸ್ವಾಗತಿಸಿದರು. ಶಶಿಕುಮಾರ್ ಬಿ.ಎನ್. ವಂದಿಸಿದರು. ವಸಂತ್ ಎಸ್. ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News