ಜಲೀಲ್ ಕರೋಪಾಡಿ ಹತ್ಯೆ ಪ್ರಕರಣ: ಕೊಲೆಗೆ ಬಳಸಿದ ಮಾರಕಾಯುಧ, ಬೈಕ್ ಪತ್ತೆ

Update: 2017-04-24 06:47 GMT

ಬಂಟ್ವಾಳ, ಎ.24: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿಯವರ ಕೊಲೆ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ಹಾಗೂ ಎರಡು ಬೈಕ್‌ಗಳು ಕರೋಪಾಡಿ ಸಮೀಪದ ಮಿತ್ತನಡ್ಕದಲ್ಲಿ ಪತ್ತೆಯಾಗಿವೆ.

ಮಿತ್ತನಡ್ಕದ ಮುಗುಳಿ ಎಂಬಲ್ಲಿನ ಪೊದೆಯೊಂದರಲ್ಲಿ ಇವು ಪತ್ತೆಯಾಗಿದೆ. ಇಲ್ಲಿನ ಪೊದೆಯೊಂದರ ಮರೆಯಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ತಲವಾರುಗಳು ಹಾಗೂ ಎರಡು ಬೈಕ್‌ಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News