ರಷ್ಯನ್ ಹ್ಯಾಕರ್‌ಗೆ ಅಮೆರಿಕದಲ್ಲಿ 27ವರ್ಷ ಜೈಲುಶಿಕ್ಷೆ !

Update: 2017-04-24 07:53 GMT

ವಾಷಿಂಗ್ಟನ್,ಎ. 24: ಅಮೆರಿಕದ ವ್ಯಾಪಾರ ಸಂಸ್ಥೆಗಳ ವಿರುದ್ಧ ಸೈಬರ್ ದಾಳಿ ನಡೆಸಿದ ಪ್ರಕರಣದಲ್ಲಿ ರಷ್ಯದ ಹ್ಯಾಕರ್ ರೋಮನ್ ಸೆಲಸ್ನೇವ್‌ರಿಗೆ (32) ಅಮೆರಿಕದ ನ್ಯಾಯಾಲಯವು 27ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ಈತನಿಂದ ದಾಳಿಗೊಳಗಾದ ವ್ಯಾಪಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಗೆ 17 ಕೋಟಿ ಡಾಲರ್ ನಷ್ಟವನ್ನು ಭರ್ತಿಮಾಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.

ವಾಷಿಂಗ್ಟನ್ ಜಿಲ್ಲಾ ಕೋರ್ಟಿನ ಜಡ್ಜ್ ರಿಚರ್ಡ್ ಎ. ಜಾನ್ಸನ್ ತೀರ್ಪು ನೀಡಿದು, ಇದು ಈ ಇಂತಹ ಪ್ರಕರಣಗಳಿಗೆ ವಿಧಿಸಲಾದ ದೊಡ್ಡ ಶಿಕ್ಷೆಯಾಗಿದೆ. ಶಿಕ್ಷೆಗೊಳಗಾದ ರೋಮನ್ ಸೆಲಸ್ನೇವ್ ರಷ್ಯದ ಪಾರ್ಲಿಮೆಂಟ್ ಸದಸ್ಯ ವಲೇರಿ ಸೆಲೆಸ್ನೇವ್‌ರಪುತ್ರನಾಗಿದ್ದಾರೆ. 2014ರಲ್ಲಿರೋಮನ್‌ರನ್ನು ಮಾಲಿದ್ವೀಪದಿಂದ ಅಮೆರಿಕನ್ ಪೊಲೀಸರು ಸೆರೆಹಿಡಿದಿದ್ದರು. ಅಮೆರಿಕ ರೋಮನ್‌ರನ್ನು ಕಾನೂನುಬಾಹಿರವಾಗಿ ಬಂಧಿಸಿದೆ ಎಂದು ರಷ್ಯ ಆರೋಪಿಸಿದೆ. ಜೊತೆಗೆ ನ್ಯಾಯಾಲಯ ತೀರ್ಪನ್ನು ರಷ್ಯ ಖಂಡಿಸಿದೆ.

  2011ರಲ್ಲಿ ಮೊರೊಕ್ಕೊದ ಬಾಂಬ್‌ದಾಳಿಯಲ್ಲಿ ಗಾಯಗೊಂಡಿದ್ದು , ತನ್ನ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡಬೇಕೆಂದು ರೋಮನ್ ಸೆಲೆಸ್ನೇವ್ ವಾದಿಸಿದ್ದರು. ಆದರೆ ನ್ಯಾಯಾಲಯ ಇದನ್ನು ನಿರಾಕರಿಸಿದೆ. ರಷ್ಯ-ಅಮೆರಿಕ ಸಂಬಂಧ ಕೆಟ್ಟು ಹೋಗಿದ್ದರಿಂದ ತನ್ನ ವಿರುದ್ಧ ನೀಡಲಾದ ತೀರ್ಪುರಾಜಕೀಯ ಪ್ರೇರಿತ ಎಂದು ರೋಮನ್‌ಸೆಲೆಸ್ನೇವ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News