×
Ad

ವೀಸಾ ಕಾನೂನು ಉಲ್ಲಂಘನೆ: ಬ್ರಿಟನ್‌ನಲ್ಲಿ 38 ಭಾರತೀಯರ ಬಂಧನ

Update: 2017-04-24 13:29 IST

ಲಂಡನ್, ಎ. 24: ಬ್ರಿಟನ್‌ನಲ್ಲಿ ವೀಸಾ ಅವಧಿ ಮುಗಿದಿದ್ದರೂ ದೇಶ ತೊರೆಯದ 38 ಮಂದಿ ಭಾರತೀಯರನ್ನು ಬ್ರಿಟಿಷ್ ಎಮಿಗ್ರೇಶನ್ ಇಲಾಖೆ ಬಂಧಿಸಿದೆ.ಲೆಸ್ಟರ್ ಸಿಟಿಯಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ 10 ಮಂದಿಮಹಿಳೆಯರ ಸಹಿತ 38 ಮಂದಿ ಸೆರೆಯಾಗಿದ್ದಾರೆ. ಕಳೆದ ವಾರ ನಗರದಲ್ಲಿ ಎರಡು ಸಂಸ್ಥೆಗಳಲ್ಲಿ ಬ್ರಿಟಿಷ್ ಇಮಿಗ್ರೇಶನ್ ಮಿಂಚಿನ ದಾಳಿ ನಡೆಸಿತ್ತು. ಭಾರತೀಯರು ಮಾತ್ರವಲ್ಲ ಅಪ್ಘಾನಿ ವ್ಯಕ್ತಿಯೊಬ್ಬ ಈವೇಳೆ ಸೆರೆಸಿಕ್ಕಿದ್ದಾನೆ.

 ಸೆರೆಯಾದವರಲ್ಲಿ31 ಮಂದಿಯ ವೀಸಾ ಅವಧಿ ಮುಗಿದಿದೆ. ಏಳುಮಂದಿಬಳಿ ಯಾವದಾಖಲೆಯೂ ಇಲ್ಲ. ಅವರು ಕಾನೂನುಬಾಹಿರವಾಗಿ ನುಸುಳಿಕೊಂಡು ಬಂದಿದ್ದಾರೆ ಎಂದು ಎಮಿಗ್ರೇಶನ್ ಅಧಿಕರಿಗಳು ಹೇಳಿದ್ದಾರೆ. ಸರಿಯಾದ ವೀಸಾ ಇಲ್ಲದವರಿಗೆ ಕೆಲಸ ಕೊಟ್ಟ ಸಂಸ್ಥೆಗಳು ಪ್ರತಿಯೊಬ್ಬ ಕೆಲಸಗಾರರ ಹೆಸರಿನಲ್ಲಿ ತಲಾ 20000 ಪೌಂಡ್ ದಂಡ ತೆರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News