ಬ್ಯಾರಿ ಸಂಭ್ರಮ ಪ್ರಯುಕ್ತ ರಕ್ತದಾನ ಶಿಬಿರ

Update: 2017-04-24 14:09 GMT

ಮಂಗಳೂರು, ಎ.24: ಬ್ಯಾರಿ ಗಾಯ್ಸ್ ಕೆಎಸ್ಎ ವತಿಯಿಂದ ಮಂಗಳೂರಿನ ಪುರಭವನದಲ್ಲಿ ನಡೆದ ಬ್ಯಾರಿ ಸಂಭ್ರಮ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ಮಂಗಳೂರಿನ ಐದು ಆಸ್ಪತ್ರೆಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಬ್ಯಾರಿ ಗಾಯ್ಸ್ ಕೆಎಸ್ಎ, ಇದರ ವತಿಯಿಂದ ನಾಲ್ಕು ಬಡ ಕುಟುಂಬಗಳಿಗಾಗಿ ನಿರ್ಮಿಸಲ್ಪಟ್ಟ ಮನೆಯನ್ನು ಗಣ್ಯರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಮುಂದಿನ 20 ಮನೆಗಳ ಯೋಜನೆಯಂತೆ ಇತರರಿಂದ ಅರ್ಜಿಯನ್ನು ಬ್ಯಾರಿ ಗಾಯ್ಸ್ ಅಡ್ಮಿನ್ ಗಳು ಸ್ವೀಕರಿಸಿದರು.

ಬ್ಯಾರಿ ಗಾಯ್ಸ್ ತಂಡದ ಅಡ್ಮಿನ್ ಗಳಾದ ನಝೀರ್ ಉಳಾಯಿಬೆಟ್ಟು, ನಝೀರ್ ಹಂಡೇಲ್, ಇಮ್ತಿಯಾಜ್ ಬಜ್ಪೆ , ಇಮ್ತಿಯಾಜ್ ಮುಂಚೂರು, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಅಧ್ಯಕ್ಷರಾದ ಸಿದ್ದಿಕ್ ಮಂಜೇಶ್ವರ, ಸದಸ್ಯರಾದ ಅಶ್ರಫ್ ಉಪ್ಪಿನಂಗಡಿ, ಲತೀಫ್ ಉಪ್ಪಿನಂಗಡಿ, ಮುಸ್ತಾಫಾ ಕೆ.ಸಿ. ರೋಡ್, ಮುನೀರ್ ಚೊಂಬುಗುಡ್ಡೆ, ಝಿಯಾ ವಿಟ್ಲ,  ಸಲಾಂ ಚೊಂಬುಗುಡ್ಡೆ, ಅಫ್ವಾನ್ ಮಂಕಿಸ್ಟ್ಯಾಂಡ್, ಬಬ್ಲು ಮಂಕಿಸ್ಟ್ಯಾಂಡ್, ಅಖಿಲ್ ಮಂಕಿಸ್ಟ್ಯಾಂಡ್, ಅಫ್ರಿದ್ ಪ್ಯಾಬ್ಲಸ್ ಸಹಕರಿಸಿದರು. 

ಕಾರ್ಯಕ್ರಮದ ಬಳಿಕ ಎಡ್ಮಿನ್ ಬಳಗ ಮಂಗಳೂರಿನ ಸರ್ಕಾರಿ  ಆಸ್ಪತ್ರೆಗಳಿಗೆ ತೆರಳಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
 

Writer - ಶಾಹುಲ್ ಹಮೀದ್ ಕಾಶಿಪಟ್ಣ

contributor

Editor - ಶಾಹುಲ್ ಹಮೀದ್ ಕಾಶಿಪಟ್ಣ

contributor

Similar News