×
Ad

ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಿ: ವಿದ್ಯಾರ್ಥಿಗಳಿಗೆ ಜಾವೆದ್ ಕರೆ

Update: 2017-04-24 22:18 IST

ಮೂಡುಬಿದಿರೆ, ಎ.24 :ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಕ್ರೀಡೆಯಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಮೂಡಿಬರಬೇಕು ಎಂದು ಯೆನೆಪೊಯ ಗ್ರೂಪ್ ಮಂಗಳೂರು ಇದರ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೆದ್ ಹೇಳಿದರು.

ಮಿಜಾರಿನ ಯೆನೆಪೊಯ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಬೆಳಗಾವಿ ಮತ್ತು ಯೆನೆಪೊಯ ತಾಂತ್ರಿಕ ವಿದ್ಯಾಲಯ ಮೂಡುಬಿದಿರೆ ಇವುಗಳ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್‌ವಲಯ ಮಹಿಳೆಯರ ಹಾಗೂ ಪುರುಷರ ಮತ್ತು ಮಂಗಳೂರು ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ ಡಿಸೋಜ ಮಾತನಾಡಿ, ಕಬಡ್ಡಿ ಜನಪ್ರಿಯ ಕ್ರೀಡೆ. ಕ್ರೀಡೆಯಿಂದ ಕ್ರಿಯಾಶೀಲತೆ, ಮಾನಸಿಕ ಕ್ಷಮತೆ ಹೆಚ್ಚುತ್ತದೆ ಎಂದರು.

ಪಂದ್ಯಾಟದ ನಿರ್ದೇಶಕ, ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ ಅತಿಥಿಗಳಿಗೆ ಕ್ರೀಡಾಪಟುಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಪ್ರಜ್ಞಾ ಉಪಾಧ್ಯ ನಿರೂಪಿಸಿದರು. ದೈಹಿಕ ಶಿಕ್ಷಣ ನಿದೇರ್ಶಕ ಲೋಕೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News