×
Ad

ವಾಸುದೇವ ರಾವ್‌ಗೆ "ನಾಟಕ ಅಕಾಡಮಿ" ಪ್ರಶಸ್ತಿ ಪ್ರದಾನ

Update: 2017-04-24 22:33 IST

ಉಡುಪಿ, ಎ.24: ಉಡುಪಿ ರಂಗಭೂಮಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಆನಂದೋತ್ಸವದ ಎರಡನೆ ದಿನವಾದ ಇಂದು ಹಿರಿಯ ರಂಗಕರ್ಮಿ ಪಿ.ವಾಸುದೇವ್ ರಾವ್ ಅವರಿಗೆ 2016ನೆ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಉಮೇಶ್ ಎಂ.ಸಾಲ್ಯಾನ್ ಮಾತನಾಡಿ, ರಂಗಮಂದಿರ ನಿರ್ಮಾಣಕ್ಕಾಗಿ ದ.ಕ. ಜಿಲ್ಲೆಗೆ 1 ಕೋಟಿ ಹಾಗೂ ಉಡುಪಿ ಜಿಲ್ಲೆಗೆ 50 ಲಕ್ಷ ರೂ. ಅನುದಾನ ಸರಕಾರದಿಂದ ಮಂಜೂರಾಗಿದ್ದರೂ ಸ್ಥಳದ ಕೊರತೆಯಿಂದ ಆ ಕಾರ್ಯ ಇನ್ನು ಬಾಕಿ ಉಳಿ ದುಕೊಂಡಿದೆ. ರಂಗ ಕಲಾವಿದರುಗಳಿಗೆ ರಂಗ ತಾಲೀಮು ಮಾಡಲು ಸಹ ಜಾಗ ಇಲ್ಲದ ಪರಿಸ್ಥಿತಿ ಈ ಎರಡು ಜಿಲ್ಲೆಗಳಲ್ಲಿ ಉದ್ಭವಿಸಿದೆ ಎಂದರು

ಉಡುಪಿ ತಹಶೀಲ್ದಾರ್ ಮಹೇಶ್ವಚಂದ್ರ ಕೆ., ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರವಿಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ಪ್ರಾಸ್ತಾವಿಕವಾಗಿ ಮಾತ ನಾಡಿದರು.

ಜತೆಕಾರ್ಯದರ್ಶಿ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಬೆಂಗಳೂರು ನಟರಂಗ ತಂಡದಿಂದ ವಿದ್ಯಾ ಕಾರಂತ್ ನಿರ್ದೇಶನದ ‘ಕಂಚುಕಿ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News