×
Ad

ಕೇರಳ ಡಿಜಿಪಿ ಸೇನ್‌ಕುಮಾರ್ ಮರು ನೇಮಕಕ್ಕೆ ಸುಪ್ರೀಂ ಆದೇಶ

Update: 2017-04-24 23:35 IST

ಹೊಸದಿಲ್ಲಿ, ಎ.24: ಉಚ್ಚಾಟಿತ ಕೇರಳ ಡಿಜಿಪಿ ಟಿ.ಪಿ.ಸೇನ್‌ಕುಮಾರ್ ಅವರನ್ನು ಮರು ನೇಮಿಸಿಕೊಳ್ಳುವಂತೆ ಕೇರಳ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಈ ರೀತಿಯ ಆದೇಶ ನೀಡಿದ ಮೊತ್ತಮೊದಲ ಪ್ರಕರಣ ಇದಾಗಿದೆ. ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತ ಈ ಆದೇಶ ನೀಡಿದರು. ಅಧಿಕಾರದಲ್ಲಿರುವ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ‘ಹರಕೆಯ ಕುರಿ’ಗಳನ್ನಾಗಿಸುವುದು ಸರಿಯಲ್ಲ ಎಂದು ಈ ಮೂಲಕ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭವನ್ನು ಪರಿಶೀಲನೆ ನಡೆಸಲಾಗಿದ್ದು ಸೇನ್‌ಕುಮಾರ್ ಅವರನ್ನು ಅನುಚಿತವಾಗಿ ನಡೆಸಿಕೊಂಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಸರಕಾರದ ನಿರ್ಧಾರವನ್ನು ರದ್ದುಗೊಳಿಸಿ ಅರ್ಜಿದಾರರನ್ನು ಮರು ನೇಮಕಗೊಳಿಸುವಂತೆ ಕೇರಳ ಸರಕಾರಕ್ಕೆ ಆದೇಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News