×
Ad

ವಳಚ್ಚಿಲ್ ನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ ಮತ್ತು ಧಾರ್ಮಿಕ ಪ್ರವಚನ

Update: 2017-04-24 23:50 IST

ಫರಂಗಿಪೇಟೆ, ಎ.24: ಶಹೀದ್ ಟಿಪ್ಪು ಸುಲ್ತಾನ್ ಅಸೋಸಿಯೇಶನ್ ಟಿಪ್ಪು ನಗರ ವಳಚ್ಚಿಲ್ ಪದವಿನಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣೆ ಮತ್ತು ಧಾರ್ಮಿಕ ಪ್ರವಚನ ಇತ್ತೀಚೆಗೆ ನಡೆಯಿತು

ಅಸೋಸಿಯೇಶನ್ ಅಧ್ಯಕ್ಷ ವಿ.ಎಚ್. ಆಸಿಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಳಚ್ಚಿಲ್ ಪದವು ಜುಮ್ಮಾ ಮಸ್ಜಿದ್ ಖತೀಬ್ ಪಿ.ಕೆ. ಇಸ್ಮಾಯೀಲ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಅಸ್ಸೈಯದ್ ತ್ವಾಹಾ ಜಿಫ್ರೀ ತಂಙಳ್ ದುಆ ನೆರವೇರಿಸಿದರು.

ಮುಖ್ಯ ಅತಿಥಿಗಾಳಾಗಿ ಜಮೀಯ್ಯತುಲ್ ಮುಅಲ್ಲಿಮೀನ್ ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ರಶೀದ್ ಹನೀಫಿ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಯಾಸೀನ್ ಅರ್ಕುಳ ಮಾತನಾಡಿದರು.

ವಳಚ್ಚಿಲ್ ಕೇಂದ್ರ ಜುಮ್ಮಾ ಮಸ್ಜಿದ್ ಖತೀಬರಾದ ಕೆ.ಐ. ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ಧಾರ್ಮಿಕ ಪ್ರವಚನ ನೀಡಿದರು, ಅತಿಥಿಗಳಾಗಿ ಅಸೋಸಿಯೇಶನ್ ಉಪಾಧ್ಯಕ್ಷ ಫಾರೂಕ್ ಕೆ.ಬಿ.ಆರ್., ವಳಚ್ಚಿಲ್ ಪದವು ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ಜೀಲಾನಿ, ಪದವು ಮಸೀದಿ ಅಧ್ಯಕ್ಷ ಮಹಮ್ಮದ್ ಮೊನಾಕ, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಉಬೈದುಲ್ಲಾ, ವಿ.ಅಬ್ಬಾಸ್, ಸಮೀರ್ ಶಾನ್, ಮಂಗಳೂರು ಸೌತ್ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ನಝೀರ್, ಪಿ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹಮದ್, ಇಸ್ಮಾಯಿಲ್ ಕೆ.ಇ.ಎಲ್., ನಿಝಾಮುದ್ದೀನ್, ವಳಚ್ಚಿಲ್ ಪದವು ಮಸೀದಿ ಪ್ರಧಾನ ಕಾರ್ಯದರ್ಶಿ ಮುಸ್ತಾಕ್, ತನ್ವೀರುಲ್ ಇಸ್ಲಾಮ್ ಸ್ವಲಾತ್ ಕಮಿಟಿ ಅಧ್ಯಕ್ಷ ವಿ.ಎಚ್. ಫಲುಲು, ಎಂ.ಎಸ್.ಕೆ ಬುಕ್ ಹೌಸ್ ಕಮಾಲ್, ಪಿ.ಎಫ್.ಐ ವಲಚ್ಚಿಲ್ ಪದವು ಅಧ್ಯಕ್ಷ ಶಬೀರ್, ಅಡ್ಯಾರ್ ಗ್ರಾಪಂ ಮಾಜಿ ಉಪಾಧ್ಯಕ್ಷ ಎ.ಬಿ. ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ಸಲೀಂ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News