×
Ad

ಶೇಖರ ಅಜೆಕಾರುಗೆ "ಕರುನಾಡ ಪದ್ಮಶ್ರೀ ಪ್ರಶಸ್ತಿ"

Update: 2017-04-25 09:35 IST

ಹೆಬ್ರಿ, ಎ.25: ಕನ್ನಡ ನಾಡು-ನುಡಿ-ಸಾಹಿತ್ಯಕ್ಕಾಗಿ ಸಲ್ಲಿಸಿದ ವಿಶೇಷ ಸೇವೆಯನ್ನು ಪರಿಗಣಿಸಿ ಹಿರಿಯ ಸಾಹಿತಿ, ಕವಿ, ಪತ್ರಕರ್ತರಾದ ಶೇಖರ ಅಜೆಕಾರು ಅವರಿಗೆ ಗೋವಾದಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ "ಕರುನಾಡ ಪದ್ಮಶ್ರೀ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಎಂಬ ಕಲ್ಪನೆಯನ್ನು ಮಾಡಿ ರಾಜ್ಯದಾದ್ಯಂತ 8 ಸಾಹಿತ್ಯ ಸಮ್ಮೇಳನ ಸಹಿತ ಸಾಹಿತ್ಯ ಕ್ಷೇತ್ರಕ್ಕೆ ಅದ್ಬುತವಾದ ಕೊಡುಗೆಯನ್ನು ನೀಡುತ್ತಿರುವ ಶೇಖರ ಅಜೆಕಾರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಘಟಕದ ಅಧ್ಯಕ್ಷರಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News