ತೆರೆದ ಕೊಳವೆಬಾವಿ ಕಂಡರೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿ: ಗುಲಾಬ್ ರಾವ್ ಬೊರಸೆ
Update: 2017-04-25 11:49 IST
ಮಂಗಳೂರು, ಎ.25: ಮಕ್ಕಳ ಜೀವಕ್ಕೆ ಅಪಾಯಕಾರಿಯಾಗುತ್ತಿರುವ ತೆರೆದ ಬೋರ್ವೆಲ್ ಗಳು ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ, ಎಸ್ಸೆಮ್ಮೆಸ್ ಅಥವಾ ವಾಟ್ಸ್ಯಾಪ್ (9480805300) ಮೂಲಕ ಮಾಹಿತಿ ನೀಡಬೇಕು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಮನವಿ ಮಾಡಿದ್ದಾರೆ.
ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೋರ್ವೆಲ್ ಮುಚ್ಚಲು ಹಾಗೂ ಬೋರ್ವೆಲ್ ಮಾಲಕರಿಗೆ ನೋಟಿಸ್ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.