×
Ad

ಎ.30: ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ

Update: 2017-04-25 12:54 IST

ಮಂಗಳೂರು, ಎ.25: ಉಳ್ಳಾಲದ ಕೀರ್ತಿ ಸ್ಪೋರ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಎ.30ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಝೀಲಾನಿ ಜುಮಾ ಮಸೀದಿ ಆಡಳಿತಕ್ಕೊಳಪಟ್ಟ ಮರ್ಕಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಸಾಮೂಹಿಕ ಸುನ್ನತ್ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಸುನ್ನತ್ ಬಟ್ಟೆ, ಔಷಧಿ, ಲಘು ಉಪಹಾರ, ಹಣ್ಣು ಹಂಪಲುಗಳನ್ನು ವಿತರಿಸಲಾಗುವುದು. ನುರಿತ ಹಾಗೂ ಅನುಭವಿ ವೈದ್ಯರು ಸುನ್ನತ್ ನಡೆಸಲಿದ್ದಾರೆ.  ಆಸಕ್ತರು ತಮ್ಮ ಮಕ್ಕಳ ಹೆಸರನ್ನು ಕೀರ್ತಿ ಸ್ಪೋರ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್ ಅವರಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ.: 9880900145 ಅಥವಾ 9964216087 ನ್ನು ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಝಿಯಾದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News