ದರ ಹೆಚ್ಚಳ: ವಿದೇಶದಿಂದ ಸಿಮೆಂಟ್ ತರಿಸಿಕೊಳ್ಳಲು ಚಿಂತನೆ

Update: 2017-04-25 09:24 GMT

ಕೊಚ್ಚಿ,ಎ.25: ಕಟ್ಟಡ ನಿರ್ಮಾಣ ಕಂಪೆನಿಗಳು ಸಿಮೆಂಟ್ ಬೆಲೆ ಹೆಚ್ಚಳದಿಂದ ಕಂಗೆಟ್ಟಿದ್ದು ವಿದೇಶದಿಂದ ಸಿಮೆಂಟ್ ತರಿಸಿಕೊಳ್ಳುವ ಸಾಧ್ಯತೆಯನ್ನೇ ಯೋಚಿಸುತ್ತಿವೆ. ಜೊತೆಗೆ ಕಾಂಪಿಟೀಷನ್ ಕಮಿಶನ್ ಆಫ್ ಇಂಡಿಯ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಲು ನಿರ್ಧರಿಸಿದೆ. ಕಟ್ಟಡ ನಿರ್ಮಾಣ ಕಂಪೆನಿಗಳ ಸಂಘಟನೆಯಾದ ಕಾನ್ಫಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯ(ಕ್ರೆಡಾಯ್) ಸಿಮೆಂಟ್‌ಗೆ ಅಕಾರಣವಾಗಿ ಬೆಲೆ ಹೆಚ್ಚಳಗೊಂಡಿದೆ ಎನ್ನುವ ದೂರಿದೆ. ಸಿಮೆಂಟ್ ತರಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಲು ಕ್ರೆಡಾಯ್ ಪ್ರತಿನಿಧಿ ಸಮಿತಿಯನ್ನು ರೂಪಿಸಿದೆ. ವಿದೇಶಗಳ ಕೆಲವು ಕಂಪೆನಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎನ್ನುವ ಸೂಚನೆಲಭಿಸಿದೆ.

2014ರಲ್ಲಿ ಸಿಮೆಂಟ್ ತಯಾರಿಸುವ ಕಂಪೆನಿಗಳು ಬೆಲೆ ಹೆಚ್ಚಿಸಿದಾಗ ಕ್ರೆಡಾಯ್ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯವನ್ನು ಸಮೀಪಿಸಿತ್ತು. ನಂತರ ಸಿಮೆಂಟ್‌ಗೆ ಹಠಾತ್ ಬೆಲೆಹೆಚ್ಚಳ ಮಾಡುವುದನ್ನು ವಿರೋಧಿಸಿತ್ತು. ಹೆಚ್ಚಿಸಿದ ಬೆಲೆ ಕಡಿಮೆಗೊಳಿಸಬೇಕೆಂದು ಒತ್ತಾಯಿಸಿತ್ತು. ಆದರೆ ಅಂದು ಸಿಮೆಂಟ್‌ಗೆ ಕೆಲವು ರಾಜ್ಯಗಳಲ್ಲಿ ಮಾತ್ರ ಬೆಲೆ ಹೆಚ್ಚಳವಾಗಿತ್ತು. ಈಸಲ ದೇಶದ ಎಲ್ಲೆಡೆಸಿಮೆಂಟ್ ದರ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ವಿರೋಧದ ಧ್ವನಿ ಹುಟ್ಟಿಕೊಂಡಿದೆ.

 ಜೊತೆ ಕೇಂದ್ರದ ಎಲ್ಲರಿಗೂ ಮನೆಯೋಜನೆ ನನೆಗುದಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಮೆಂಟ್ ತಯಾರಿ ಕಂಪೆನಿಗಳ ಬೆಲೆಹೆಚ್ಚಳದ ಕುರಿತು ಪ್ರಧಾನಿಗೆ ದೂರು ನೀಡಲಾಗುವುದು ಎಂದು ಕ್ರೆಡಾಯ್ ತಿಳಿಸಿದೆ. ಸಿಮೆಂಟ್‌ಗೆ ಚೀನಾ, ಬಾಂಗ್ಲಾದೇಶ, ಇರಾನ್, ದಕ್ಷಿಣಕೊರಿಯದಲ್ಲಿ ಕಡಿಮೆಬೆಲೆ ಇದೆ. ತರಿಸಿಕೊಂಡರೆ ಆಗುವ ತೆರಿಗೆ ಇತ್ಯಾದಿ ಸೇರಿ ಸಿಮೆಂಟು ಐವತ್ತು ಕೆ.ಜಿ. ಚೀಲಕ್ಕೆ 220ರೂಪಾಯಿ ಮಾತ್ರ ಆಗುತ್ತದೆ ಎಂದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಂಪೆನಿಗಳು ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News