ಮಂಗಳಂ ಟಿವಿಯ ಸಿಇಒ ಮತ್ತು ಹಿರಿಯ ಪತ್ರಕರ್ತನಿಗೆ ಜಾಮೀನು

Update: 2017-04-25 13:14 GMT

ಕೊಚ್ಚಿ,ಎ.25: ರಾಜ್ಯದ ಸಚಿವರೋರ್ವರು ಆಡಿದ್ದರೆನ್ನಲಾದ ಕೊಳಕು ಮಾತುಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಮಲಯಾಳಂ ಟಿವಿ ವಾಹಿನಿ ಮಂಗಳಂನ ಸಿಇಒ ಮತ್ತು ಎಂಡಿ ಆರ್. ಅಜಿತ್ ಕುಮಾರ್ ಮತ್ತು ಅದರ ಹಿರಿಯ ಪತ್ರಕರ್ತ ಜಯಚಂದ್ರನ್ ಅವರಿಗೆ ಕೇರಳ ಉಚ್ಚ ನ್ಯಾಯಾಲಯವು ಮಂಗಳವಾರ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ. ಟಿವಿಯಲ್ಲಿ ತನ್ನ ಮಾತುಗಳು ಪ್ರಸಾರಗೊಂಡ ಬಳಿಕ ಸಚಿವರು ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮ್ಮ ಪಾಸ್‌ಪೋರ್ಟ್‌ಗಳನ್ನು ಅಧಿಕಾರಿಗಳಿಗೆ ಒಪ್ಪಿಸುವಂತೆ ಮತ್ತು ಎರಡು ತಿಂಗಳವರೆಗೆ ಟಿವಿ ವಾಹಿನಿಯ ಕಚೇರಿಯನ್ನು ಪ್ರವೇಶಿಸದಂತೆ ನ್ಯಾ.ಅಬ್ರಹಾಂ ಮ್ಯಾಥ್ಯೂ ಅವರು ಆರೋಪಿಗಳಿಗೆ ನಿರ್ದೇಶ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸುದ್ದಿವಾಚಕ ಸೇರಿದಂತೆ ಇತರ ಮೂವರು ಆರೋಪಿಗಳಿಗೆ ನ್ಯಾಯಾಲಯವು ಈಗಾಗಲೇ ಜಾಮೀನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News