×
Ad

ಭಾರತಕ್ಕೆ ರಾಮಾಯಣ-ಮಹಾಭಾರತ ಬೇಕಾಗಿಲ್ಲ: ಬಸವ ಜಯ ಮೃತ್ಯುಂಜಯ ಮಹಾಸ್ವಾಮಿ

Update: 2017-04-25 19:52 IST

ಮಂಗಳೂರು, ಎ.25: ಭಾರತದ ಸರ್ವತೋಮುಖ ಅಭಿವೃದ್ಧಿಗೆ, ನವಸಮಾಜದ ನಿರ್ಮಾಣಕ್ಕೆ ಬೇಕಾಗಿರುವುದು ರಾಮಾಯಣದ, ಮಹಾಭಾರತದ ಭಾರತವಲ್ಲ. ಬದಲಾಗಿ ಬುದ್ಧ, ಬಸವಣ್ಣ, ಭಗತ್‌ಸಿಂಗ್, ಡಾ.ಬಿ.ಆರ್. ಅಂಬೇಡ್ಕರ್‌ರ ಭಾರತ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿ ಹೇಳಿದರು.

ನಗರದ ಉರ್ವಾಸ್ಟೋರ್‌ನ ಸುಂಕದಕಟ್ಟೆ ಪ್ರದೇಶದಲ್ಲಿ ಕಾಮ್ರೇಡ್ ಸುಧೀರ್ ಕುಮಾರ್ ಸ್ಮಾರಕ ಗ್ರಂಥಾಲಯ ಮತ್ತು ಡಿವೈಎಫ್‌ಐ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿವೈಎಫ್‌ಐ ಸಂಘಟನೆ ದೇಶಾದ್ಯಂತ ಬಡವರ, ಅನ್ಯಾಯಕ್ಕೊಳಗಾದವರ ಬಗ್ಗೆ ನಿರಂತರ ಬೀದಿಗಿಳಿದು ಅವರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಡಿವೈಎಫ್‌ಐ ಭವನವು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯಾಗಬೇಕು ಎಂದು ಹೇಳಿದರು.

ಡಿವೈಎಫ್‌ಐ ಭವನ ಕಟ್ಟಡ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಮಂಗಳೂರು ನಗರದ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ನಿವೇಶನರತರ ಹೋರಾಟ ಸಮಿತಿಯ ಮಂಗಳೂರು ನಗರ ಕಾರ್ಯದರ್ಶಿ ಸಂತೋಷ್ ನೀತಿನಗರ, ಕಟ್ಟಡ ಸಮಿತಿಯ ಮಂಗಳೂರು ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಎಸ್.ವೈ. ಗುರುಶಾಂತ್, ಚಿತ್ರನಟ ವಿಸ್ಮಯ ವಿನಾಯಕ ಭಾಗವಹಿಸಿದ್ದರು.

ಸ್ಥಳೀಯ ಮುಖಂಡರಾದ ಮನೋಜ್ ಕುಲಾಲ್, ಕಿಶೋರ್, ಧನರಾಜ್, ಇಕ್ಬಾಲ್, ನಾಗೇಂದ್ರ, ರಘುವೀರ, ಶುೃತಿ, ಹರಿನಾಕ್ಷಿ, ಪ್ರಶಾಂತ್ ಎಂ.ಬಿ. ಪ್ರಶಾಂತ್ ಆಚಾರ್, ಸುಕೇಶ್ ಮುಂತಾದವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News