ಸಿರಿಯ: 271 ಸರಕಾರಿ ಉದ್ಯೋಗಿಗಳ ವಿರುದ್ಧ ಅಮೆರಿಕ ದಿಗ್ಬಂಧನ

Update: 2017-04-25 14:23 GMT

ವಾಶಿಂಗ್ಟನ್, ಎ. 25: ಸಿರಿಯದ ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಉತ್ಪಾದನೆಯ ಜವಾಬ್ದಾರಿ ಹೊಂದಿರುವ ಸಂಸ್ಥೆಯೊಂದಿಗೆ ನಂಟು ಹೊಂದಿರುವ 271 ಮಂದಿಯ ವಿರುದ್ಧ ಅಮೆರಿಕ ಸೋಮವಾರ ದಿಗ್ಬಂಧನಗಳನ್ನು ವಿಧಿಸಿದೆ.

ಇತ್ತೀಚೆಗೆ ಸಿರಿಯದ ಬಂಡುಕೋರರ ಪ್ರಾಬಲ್ಯದ ಪಟ್ಟಣವೊಂದರಲ್ಲಿ ನಾಗರಿಕರ ಮೇಲೆ ಅಧ್ಯಕ್ಷ ಬಶರ್ ಅಲ್ ಅಸಾದ್ ಸರಕಾರ ನಡೆಸಿದೆಯೆನ್ನಲಾದ ರಾಸಾಯನಿಕ ದಾಳಿಯ ವಿರುದ್ಧ ಅಮೆರಿಕ ತೆಗೆದುಕೊಳ್ಳುತ್ತಿರುವ ಪ್ರತೀಕಾರಾತ್ಮಕ ಕ್ರಮಗಳ ಭಾಗ ಇದು ಎನ್ನಲಾಗಿದೆ.

ದಿಗ್ಬಂಧನೆಗೆ ಒಳಗಾದವರು ಸಿರಿಯದ ‘ಸಾಯಿಂಟಿಫಿಕ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸೆಂಟರ್’ನ ಉದ್ಯೋಗಿಗಳು. ಈ ಸಂಸ್ಥೆಯು ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತದೆ ಎಂದು ಅಮೆರಿಕ ಹೇಳುತ್ತದೆ.

ಸಿರಿಯದ ರಾಜ್ಯ ಇದ್ಲಿಬ್‌ನ ಉತ್ತರ ಭಾಗದ ಪಟ್ಟಣವೊಂದರ ನಾಗರಿಕರ ಮೇಲೆ ಈ ತಿಂಗಳ ಆದಿ ಭಾಗದಲ್ಲಿ ಅಸಾದ್ ಸರಕಾರ ರಾಸಾಯನಿಕ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ.ಈ ದಾಳಿಯಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News