"ಗುಜರಾತ್ ಮಾದರಿ ಕೋಮುಗಲಭೆಯನ್ನು ಕೇರಳದಲ್ಲೂ ಸೃಷ್ಟಿಸಲು ಸಂಘಪರಿವಾರದಿಂದ ಹುನ್ನಾರ"

Update: 2017-04-25 14:46 GMT

ಕಾಸರಗೋಡು, ಎ.25: ಮದ್ರಸ ಶಿಕ್ಷಕ ರಿಯಾಝ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣ ವಿಚಾರಣೆಗೆ ವಿಶೇಷ ಪ್ರಾಸಿಕ್ಯೂಟರನ್ನು ನೇಮಿಸಬೇಕು, ಕಾಸರಗೋಡಿನಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಸರಗೋಡು ಯುವಜನ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ಧರಣಿಯನ್ನು ಉದ್ಘಾಟಿಸಿದ ಮಾತನಾಡಿದ ಪಿಡಿಪಿ ರಾಜ್ಯ ಮಾಜಿ ಕಾರ್ಯಾಧ್ಯಕ್ಷ ಸಿ.ಕೆ. ಅಬ್ದುಲ್  ಅಝೀಝ್, ಕೇರಳದಲ್ಲಿ  ಕೋಮುವಾದಿ ಶಕ್ತಿಗಳು ಬೇರೂರಲು ಪ್ರಯತ್ನಿಸುತ್ತಿದ್ದು, ಇಂತಹ ಶಕ್ತಿಗಳನ್ನು ಕಿತ್ತೊಗೆಯಬೇಕು. ಗುಜರಾತ್ ನಲ್ಲಿ ನಡೆಸಿದ ಕೋಮುಗಲಭೆಯನ್ನು ಕೇರಳದಲ್ಲೂ ಸೃಷ್ಟಿಸಿ ಕೋಮು ಧ್ರುವೀಕರಣಕ್ಕೆ ಸಂಘಪರಿವಾರ ಹುನ್ನಾರ ನಡೆಸುತ್ತಿದೆ ಎಂದರು.

ಯುವಜನ ಒಕ್ಕೊಟದ ಜಿಲ್ಲಾಧ್ಯಕ್ಷ  ಇಬ್ರಾಹಿಂ ಬಾಂಗೋಡ್ ಅಧ್ಯಕ್ಷತೆ  ವಹಿಸಿದ್ದರು .

ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಮಾಜಿ ಶಾಸಕ ಸಿ.ಎಚ್. ಕುಞಾoಬು, ಕರೀಂ ಚಂದೇರ, ಸ್ವಾಮಿ ವರ್ಕಲ ರಾಜ್, ಎ.ಬಿ. ಬಾಲಕೃಷ್ಣನ್ , ಎ.ಕೆ. ಎಂ.ಅಶ್ರಫ್ , ಕೆ. ಮಣಿಕಂಠನ್,  ರಿಯಾಝ್ ಫರಂಗಿಪೇಟೆ, ವಿನೋದ್ , ನೌಫಲ್ ಉಳಿಯತ್ತಡ್ಕ, ಯೂಸುಫ್, ವಿ.ವಿ. ಪ್ರಭಾಕರನ್, ಅಶ್ರಫ್ ಬಾಯಾರ್, ಝುಬೈರ್ ಪೆಡುಪ್ಪು ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News