ಎ.23ರಿಂದ ಸುರಗಿರಿ-ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ

Update: 2017-04-25 14:55 GMT

ಮುಲ್ಕಿ, ಎ.25: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸೇರಿದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಎಪ್ರಿಲ್ 23 ರಿಂದ ಮೇ 5ರವರೆಗೆ ನಡೆಯಲಿದೆ ಎಂದು ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ ಹೇಳಿದರು.

ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಎಪ್ರಿಲ್ 26 ರಂದು ಬೆಳಗ್ಗೆ 8ರಿಂದ ತೋರಣ ಮೂಹೂರ್ತ, ಉಗ್ರಾಣ, ಮೂಹೂರ್ತ, ಸಂಜೆ 7:30 ರಿಂದ ವಿವಿಧ ಗಣ್ಯರ ಉಪಸ್ಥಿಯಲ್ಲಿ ಸಭಾ ಕಾರ್ಯಕ್ರಮ ನಂತರ ಮಂಗಳೂರು ಲಕುಮಿ ತಂಡದಿಂದ ‘ದುಂಬೋರಿ ಪಂತೆಗೆ’ ಹಾಸ್ಯಮಯ ನಾಟಕ ನಡೆಯಲಿದೆ.

ಎ.27 ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6:30ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ  ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ರಾಷ್ಟ್ರದೇವೋಭವ ಕಾರ್ಯಕ್ರಮ ನಡೆಯಲಿದೆ. ಎ.28ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳಿ ನಡೆಯಲಿದ್ದು, ಸಂಜೆ 6:30 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ, ನಂತರ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಸಂಘ ಸಿದ್ದಕಟ್ಟೆ ಇವರಿಂದ ‘ಶಿವ ಭಕ್ತ ಶಿವಾಮಣಿ’ ಯಕ್ಷಗಾನ ನಡೆಯಲಿದೆ.

ಎ.29 ರಂದು ಬೆಳಗ್ಗೆ 5 ಗಂಟೆಗೆ, ಗಣಪತಿ ದೇವರ ಬಿಂಬ ಪ್ರತಿಷ್ಟಾಪನೆ, ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಲೇಪನ, ಮ್ರತ್ಯುಂಜಯ ಹೋಮ, 108 ತೆಂಗಿನಕಾಯಿ ಗಣಯಾಗ, ವಿಶೇಷ ಶಾಂತಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೇಯಲಿವೆ. ಸಂಜೆ 6: 30 ರಿಂದ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈಭವ, ವಿಠಲ ನಾಯಕ್ ಕಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಎ. 30 ರಂದು ಬೆಳಗ್ಗೆ ಮಹಾಗಣಪತಿ ದೇವರಿಗೆ 108 ಪರಿಕಲಸ ಸಹಿತ ಬ್ರಹ್ಮಕಲಶಾಭಿಷೇಕ, ನಾಗ ಪ್ರತಿಷ್ಟೆ, ನಾಗದೇವರಿಗೆ ಕಲಶಾಭಿಷೇಕ, ಆಶ್ಲೇಷಾ ಬಲಿ, ಅಣ್ಣಪ್ಪಪಂಜುರ್ಲಿ ಪ್ರತಿಷ್ಟೆ ಕಲಾಶಾಭಿಷೇಕ, ಮಂಡಲ ರಚನೆ ಸಂಜೆ 5 ರಿಂದ ಜಿಲ್ಲೆಯ ಪ್ರಸಿದ್ಧ ಆಯ್ದ ಕಲಾವಿದರಿಂದ ಯಕ್ಷಗಾನ ವೈಭವ , ರಾತ್ರಿ 9 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಮೇ 1 ರಂದು ಬೆಳಗ್ಗೆ 9:10ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ 504 ಪರಿಕಲಶ ಸಹಿತ ಭ್ರಹ್ಮಕಲಶೋತ್ಸವ, ರಾತ್ರಿ 6:30 ರಿಂದ ನೃತ್ಯ ವೈಭವ ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10 ಗಂಟೆಗೆ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು, ನಮ್ಮ ಕಲಾವಿದರು ಬೆದ್ರ ಹಾಗೂ ವಿಸ್ಮಯ ವಿನಾಯಕ ತಂಡದಿಂದ ಬಂಜರ ತೆಲಿಕೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಆಡಳಿತ ಮುಕ್ತೇಸರ ಕೆ. ಸೀತಾರಾಮ ಶೆಟ್ಟಿ ದುರ್ಗಾದಯಾ ಮಾತನಾಡಿ, ದೇವಳದಲ್ಲಿ ಬ್ರಹ್ಮಕಲಶದ ನಿಮಿತ್ತ ಮಹಾಗಣಪತಿ ದೇವರ ಶಿಲಾಮಯ ಗರ್ಭಗುಡಿ, ಶಿಲಾಮಯತೀರ್ಥ ಮಂಟಪ, ದೇವಳದ ಮುಂಭಾಗದಲ್ಲಿ ಅಣ್ಣಪ್ಪಪಂಜುರ್ಲಿ ದೈವಸ್ಥಾನ, ನೂತನ ಪುಷ್ಕರಣಿ, ನಾಗದೇವರ ಸನ್ನಿಧಿ, ದೇವಾಲಯದ ಒಳಾಂಗಣದ ಮೇಲ್ಚಾವಣಿ, ಹಾಗೂ ಶಿಲ್ಪಕಲೆಗಳಿಂದ ಒಳಗೊಂಡ ಕೆಲಸ ಕಾರ್ಯಗಳು ಸುಮಾರು 4 ಕೋಟಿ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಡೆಯುತ್ತಿದ್ದು, ಮುಕ್ತಾಯ ಹಂತದಲ್ಲಿದೆ. ಮೇ 2 ರಿಂದ 5 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ದೇವರ ಎಲ್ಲಾ ಕಾರ್ಯಗಳ ಯಶಸ್ಸಿಗೆ ಸೂಕ್ತ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಳದ ಅರ್ಚಕ ವಿಶ್ವೇಶ್ವರ ಭಟ್, ಮುಕ್ತೇಸರರಾದ ವೈ.ಬಾಲಚಂದ್ರ ಭಟ್, ಕೆ. ಧನಂಜಯ ಶೆಟ್ಟಿಗಾರ್ ಸಾಗರಿಕಾ, ಕಾರ್ಯಾಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ಪ್ರಧಾನ ಕಾರ್ಯದರ್ಶಿ ಕೆ. ಲವ ಶೆಟ್ಟಿ ಕೆಮ್ರಾಲ್, ಪ್ರಧಾನ ಕೋಶಾಧಿಕಾರಿ ರಮಾನಂಥ ಎನ್. ಶೆಟ್ಟಿ ಅಮಿತಾ ನಿವಾಸ, ಕೆಮ್ರಾಲ್, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್ ಶೆಟ್ಟಿ ಅತ್ತೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News