ಪುತ್ರಿಯನ್ನು ಕೊಲ್ಲುವ ವೀಡಿಯೊ ಫೇಸ್‌ಬುಕ್‌ಗೆ ಹಾಕಿದ ವ್ಯಕ್ತಿ

Update: 2017-04-25 15:04 GMT

ಬ್ಯಾಂಕಾಕ್, ಎ. 25: ಥಾಯ್ಲೆಂಡ್‌ನ ಓರ್ವ ವ್ಯಕ್ತಿಯು ತನ್ನ 11 ತಿಂಗಳ ಪುತ್ರಿಯನ್ನು ತಾನೇ ಕೊಲ್ಲುವ ಭೀಭತ್ಸ ದೃಶ್ಯಗಳನ್ನೊಳಗೊಂಡ ಎರಡು ವೀಡಿಯೊ ಕ್ಲಿಪ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ವರದಿಯಾಗಿದೆ.

ಮಗುವಿನ ಕೊಲೆಯ ವೀಡಿಯೊಗಳು ಆತನ ಫೇಸ್‌ಬುಕ್ ಪುಟದಲ್ಲಿ ಸುಮಾರು 24 ಗಂಟೆಗಳ ಕಾಲ ಲಭ್ಯವಿದ್ದವು ಎಂದು ಪೊಲೀಸರು ಮಂಗಳವಾರ ತಿಳಿಸಿದರು. ಮಂಗಳವಾರ ಸ್ಥಳೀಯ ಸಮಯ ಸಂಜೆ 5 ಗಂಟೆಯ ವೇಳೆಗೆ ವೀಡಿಯೊಗಳನ್ನು ತೆಗೆಯಲಾಯಿತು.

ವ್ಯಕ್ತಿಯು ಥಾಯ್ಲೆಂಡ್‌ನ ಕರಾವಳಿ ಪಟ್ಟಣ ಪುಕೇತ್‌ನ ನಿರ್ಜನ ಕಟ್ಟಡವೊಂದರಲ್ಲಿ ಮಗುವಿನ ಕೊರಳಿಗೆ ಹಗ್ಗ ಕಟ್ಟಿ ಮೇಲ್ಛಾವಣಿಯಿಂದ ಕೆಳಗೆ ಬಿಡುತ್ತಿರುವ ದೃಶ್ಯಗಳು ವೀಡಿಯೊದಲ್ಲಿವೆ. ಆತನ ಆತ್ಮಹತ್ಯೆ ಫೇಸ್‌ಬುಕ್‌ನಲ್ಲಿ ಪ್ರಸಾರವಾಗಿಲ್ಲ. ಆದರೆ, ಮಗಳ ಸಮೀಪವೇ ಆತನ ನಿರ್ಜೀವ ದೇಹ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News