ಉತ್ತರ ಕೊರಿಯಕ್ಕೆ ಮತ್ತೆ ವಿಮಾನ ಹಾರಾಟ: ಏರ್ ಚೀನಾ

Update: 2017-04-25 15:11 GMT

ಬೀಜಿಂಗ್, ಎ. 25: ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನ ಹಾರಾಟವನ್ನು ಚೀನಾದ ವಿಮಾನಯಾನ ಕಂಪೆನಿ ಏರ್ ಚೀನಾ ಪುನಾರಂಭಿಸಿದೆ. ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಕೈಬಿಡುವಂತೆ ಉತ್ತರ ಕೊರಿಯದ ಮೇಲೆ ಒತ್ತಡ ಹೇರುವ ಕ್ರಮವಾಗಿ ವಿಮಾನ ಹಾರಾಟವನ್ನು ಚೀನಾ ನಿಲ್ಲಿಸಿದೆ ಎಂಬ ಊಹಾಪೋಹಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಬೀಜಿಂಗ್ ಮತ್ತು ಪ್ಯಾಂಗ್‌ಯಾಂಗ್ ನಡುವೆ ಪ್ರತಿ ಸೋಮವಾರ ಮತ್ತು ಶುಕ್ರವಾರ ತನ್ನ ಹಾರಾಟವನ್ನು ಏರ್ ಚೀನಾ ಮೇ 5ರಿಂದ ಪುನಾರಂಭಿಸಲಿದೆ ಎಂದು ಏರ್ ಚೀನಾ ಗ್ರಾಹಕ ಸೇವಾ ಪ್ರತಿನಿಧಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಮಂಗಳವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News