×
Ad

​ಪುತ್ತೂರು ಎಪಿಎಂಸಿ: ಶೇ. 43.96 ಮತದಾನ

Update: 2017-04-25 22:04 IST

ಪುತ್ತೂರು, ಎ.25: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಪುತ್ತೂರು ಇದರ 12 ಕ್ಷೇತ್ರಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 43.96 ಮತದಾನವಾಗಿದೆ. ತಾಲೂಕಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ಶಾಂತಿಯುತವಾಗಿ ನಡೆದಿದೆ.

ಪುತ್ತೂರು ಎಪಿಎಂಸಿಯಲ್ಲಿ 13 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈ ಪೈಕಿ ಸಹಕಾರ ಕ್ಷೇತ್ರಕ್ಕೆ ಅವಿರೋಧ ಆಯ್ಕೆ ನಡೆದ ಕಾರಣ ಉಳಿದ 12 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಕ್ಷೇತ್ರದಲ್ಲಿ ಒಟ್ಟು 53,739 ಮತದಾರರಿದ್ದು, ಈ ಪೈಕಿ 17,743 ಪುರುಷರು ಹಾಗೂ 5,879 ಮಹಿಳೆಯರು ಸೇರಿದಂತೆ ಒಟ್ಟು 23,622 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಳಿನೆಲೆಯ 18ನೇ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ. 77.92 ಮತದಾನವಾಗಿದೆ.

ಕುಟ್ರುಪ್ಪಾಡಿಯ 24ನೇ ಮತಗಟ್ಟೆಯಲ್ಲಿ ಶೇ. 71.68 ಮತದಾನವಾಗಿದ್ದು, ಕೊಯ್ಲದ 31ನೇ ಮತಗಟ್ಟೆಯಲ್ಲಿ ಅತಿ ಕಡಿಮೆ ಶೇ. 15.67 ಮತದಾನ ದಾಖಲಾಗಿದೆ. ವರ್ತಕ ಕ್ಷೇತ್ರಕ್ಕೆ ಪುತ್ತೂರು ನಗರದ ಎಪಿಎಂಸಿ ಯಾರ್ಡ್ ಮತಗಟ್ಟೆಯಲ್ಲಿ ಮತದಾನ ನಡೆದಿದ್ದು, ಇಲ್ಲಿ ಶೇ. 76.06 ಮತ ಚಲಾವಣೆಯಾಗಿದೆ. ಮತಗಳ ಎಣಿಕೆ ಕಾರ್ಯ ಎಪ್ರಿಲ್ 27ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News