ಸರ್ಕಾರವನ್ನು ಬಿಟ್ಟು ಬೇರೆಲ್ಲರನ್ನೂ ಪ್ರಶ್ನಿಸಿದ ಅರ್ನಬ್ ಗೆ ಜನರಿಂದ 'ಚುಚ್ಚು ಮದ್ದು'

Update: 2017-04-25 16:52 GMT

ಹೊಸದಿಲ್ಲಿ, ಎ. 25 : ಛತ್ತೀಸ್ ಗಢದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿಯಲ್ಲಿ ನಕ್ಸಲರು 25 ಸಿಆರ್ ಪಿಎಫ್ ಯೋಧರನ್ನು ಕೊಂದಿದ್ದಾರೆ. ನಕ್ಸಲರ ಹೋರಾಟದ ಕುರಿತು ಅನುಕಂಪ ವ್ಯಕ್ತಪಡಿಸುವವರೂ ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿರುವ ಕೃತ್ಯವಿದು. ಸಹಜವಾಗಿಯೇ ಇದು ಸದ್ಯದ ಅತಿದೊಡ್ಡ ಸುದ್ದಿ. 

ಟೈಮ್ಸ್ ನೌ ಚಾನಲ್ ನಲ್ಲಿ ರಾಹುಲ್ ಶಿವಶಂಕರ್ ಹಾಗು ನಾವಿಕ ಕುಮಾರ್ ಎಂದಿನಂತೆ ಈ ಸುದ್ದಿಯ ಚರ್ಚೆಯಲ್ಲಿ ಎಲ್ಲ ಪ್ರಗತಿಪರರನ್ನು, ಜಾತ್ಯತೀತರನ್ನು ತರಾಟೆಗೆ ತೆಗೆದುಕೊಂಡರು. ಜೆ ಎನ್ ಯು ನ ಕನ್ಹಯ್ಯ ಹಾಗು ಉಮರ್ ಖಾಲಿದ್ ರನ್ನೂ ಎಳೆದು ತಂದರು. 

ಆದರೆ ಅದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಟಿವಿಯೇ ಇಲ್ಲದ ಅರ್ನಬ್ ಠೀವಿ . ಅವರ ಇನ್ನಷ್ಟೇ ಪ್ರಾರಂಭವಾಗಲಿರುವ ರಿಪಬಲಿಕ್ ಟಿವಿ ಯ ಟ್ವಿಟ್ಟರ್ ಖಾತೆಯಲ್ಲಿ ನಕ್ಸಲ್ ದಾಳಿಯ ಕುರಿತು  ಅರ್ನಬ್ ಪ್ರಶ್ನೆಗಳು ಎಂದು ಹಲವಾರು ಪ್ರಶ್ನೆಗಳನ್ನು ಟ್ವೀಟ್ ಮಾಡಲಾಯಿತು. ಈ ಎಲ್ಲ ಪ್ರಶ್ನೆಗಳು ಪ್ರಗತಿಪರರು, ಎನ್ ಜಿ ಒ ಗಳು , ಜಾತ್ಯತೀತರನ್ನೇ ಗುರಿಯಾಗಿಸಿದ್ದವು. ಆದರೆ ವಿಶೇಷವೆಂದರೆ, ಇಷ್ಟು ದೊಡ್ಡ ಭದ್ರತಾ ವೈಫಲ್ಯ ಹಾಗು ಯೋಧರ ಮಾರಣಹೋಮ ನಡೆದ ಕುರಿತು ಒಂದೇ ಒಂದು ಪ್ರಶ್ನೆ ಸರ್ಕಾರಕ್ಕೆ ಇರಲಿಲ್ಲ ! ಬಹುಶ ಅರ್ನಬ್ ಅದನ್ನು ಮರೆತೇ ಬಿಟ್ಟಿದ್ದರು. 

ಈ ಹಿಂದೆ ಯುಪಿಎ ಅವಧಿಯಲ್ಲಿ ನಕ್ಸಲ್ ದಾಳಿ ನಡೆದಿದ್ದಾಗ ಸರ್ಕಾರವನ್ನು ಯದ್ವಾ ತದ್ವಾ ಟೀಕಿಸಿದ್ದ ಅರ್ನಬ್ ಈಗ ಮಾತ್ರ ಸರ್ಕಾರವನ್ನು ಪ್ರಶ್ನಿಸುವ ಸಮಸ್ಯೆಯನ್ನೇ ತೆಗೆದುಕೊಳ್ಳಲಿಲ್ಲ. 

ಸಹಜವಾಗಿಯೇ ಅರ್ನಬ್ ರ ಈ ಮರೆಗುಳಿ ಸಮಸ್ಯೆಗೆ ಟ್ವಿಟ್ಟರ್ ಬಳಕೆದಾರರು ಸೂಕ್ತ ಚುಚ್ಚು ಮದ್ದು ನೀಡಿದರು. ಅವುಗಳ ಸ್ಯಾಂಪಲ್ ಗಳು ಇಲ್ಲಿವೆ : 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News