ಎಸ್ಸೆಸ್ಸೆಫ್ ಕ್ಯಾಂಪಸ್ ಮೂಡುಬಿದಿರೆ ಡಿವಿಶನ್ ವತಿಯಿಂದ ಕೆರಿಯರ್ ಗೈಡೆನ್ಸ್ ಸೆಮಿನಾರ್

Update: 2017-04-25 17:21 GMT

ಕೈಕಂಬ,ಎ.25: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಮೂಡಬಿದ್ರೆ ಡಿವಿಶನ್ ಕ್ಯಾಂಪಸ್ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ 'ವಾಟ್ ನೆಕ್ಸ್ಟ್' ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ ಕೈಕಂಬ ಮೆಗಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು.

ಡಿವಿಶನ್ ಅಧ್ಯಕ್ಷ ಹಾಫಿಝ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದ್ದರು. ಕೈಕಂಬ ಸುನ್ನೀ ಕೋ ಆರ್ಡಿನೇಶನ್ ಮುಖಂಡ ಕೋಯ ಉಸ್ತಾದ್ ಉದ್ಘಾಟಿಸಿದರು.

ಕೆಜಿಎನ್ ವಿದ್ಯಾಸಂಸ್ಥೆಯ ಉಪನ್ಯಾಸಕ ಎ.ಕೆ. ನಂದಾವರ ಮತ್ತು ಟ್ರೈನರ್ ಮುಹಮ್ಮದ್ ನಾಸಿರ್ ಬಜ್ಪೆ "ಕೆರಿಯರ್ ಗೈಡೆನ್ಸ್ ಮತ್ತು ಗೋಲ್ ಸೆಟ್ಟಿಂಗ್" ವಿಷಯವನ್ನಾಧರಿಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಿದರು.

ವೇದಿಕೆಯಲ್ಲಿ ಅಸ್ರಾರುದ್ದೀನ್ ಅರೆಬಿಕ್ ಕಾಲೇಜು ಪ್ರಾಂಶುಪಾಲ ಬದ್ರುದ್ದೀನ್ ಅಝ್‌ಹರಿ, ಡಿವಿಶನ್ ಕಾರ್ಯದರ್ಶಿ ನೌಫಲ್, ಕೋಶಾಧಿಕಾರಿ ಜಲೀಲ್ ಮೊಗರು ಉಪಸ್ಥಿತರಿದ್ದರು. ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News