ಎ.29,30ಕ್ಕೆ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ವಾರ್ಷಿಕೋತ್ಸವ

Update: 2017-04-25 17:29 GMT

ಮೂಡುಬಿದಿರೆ, ಎ.25: ಜಿಲ್ಲೆಯ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತೋಡಾರಿನ ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಏಳನೇ ವಾರ್ಷಿಕ ಸಮ್ಮೇಳನ ಎ.29 ಮತ್ತು 30ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿಯ ಸಲೀಂ ಹಂಡೇಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ಮಗ್ರಿಬ್ ಬಳಿಕ ಸೈಯದ್ ಅಲಿ ತಂಙಳ್ ಕುಂಬೋಲ್ ನೇತೃತ್ವದಲ್ಲಿ ಆಧ್ಯಾತ್ಮಿಕ ದಿಕ್ರ್ ಮಜ್ಲಿಸ್ ನಡೆಯಲಿದ್ದು, ಸಮಸ್ತ ಕೇರಳ ಜಮೀಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಅಲಿಕುಟ್ಟಿ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಮೌಲಾನ ನಿಝಾಮುದ್ದೀನ್ ಬಾಖವಿ ಪ್ರಭಾಷಣ ಮಾಡಲಿದ್ದಾರೆ.

ಎ.30ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತದ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು, ಅಜ್ಮೀರ್ ದರ್ಗಾದ ಖಾದಿಮ್ ಮುಹಿಬ್ಬುಲ್ಲಾಹಿ ಪೂಕೋಯ ತಂಙಳ್, ಸಮಸ್ತದ ದ.ಕ. ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಹುದವಿ ಕೊಡುವಳ್ಳಿ ಮತ್ತಿತರ ಪ್ರಮುಖರು ಮುಖ್ಯ ಭಾಷಣ ಮಾಡಲಿದ್ದಾರೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಪ್ರತಿಮ ಸಾಧನೆ ತೋರಿದ ಅಬ್ದುಲ್ ಕರೀಂ ಹಾಜಿ ಶಿರಸಿ ಅವರಿಗೆ ’ಶಂಸುಲ್ ಉಲಮಾ ಅವಾರ್ಡ್ 2017’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರಹಿಮಾನ್, ಅಬೂಬಕರ್ ಅರ್ಹರಿ ಮತ್ತು ಬಾವ ಮೈಯ್ಯದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News