​ಎ.26: ಮೇಲಂಗಡಿ ಮಸೀದಿ ಕಟ್ಟಡ ಉದ್ಘಾಟನೆ

Update: 2017-04-25 17:49 GMT

ಉಳ್ಳಾಲ, ಎ.25: ಉಳ್ಳಾಲ ಮೇಲಂಗಡಿಯ ಮುಹಿಯುದ್ದೀನ್ ಜುಮಾ ಮಸೀದಿಯ ನವೀಕೃತ ಕಟ್ಟಡವನ್ನು ಎ. 26ರಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಸೈಯದ್ ಜೆಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ ಎಂದು ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ದುಆ ನೆರವೇರಿಸಲಿದ್ದಾರೆ. ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

‘ಹೊಸಪಳ್ಳಿ’ ಎಂದೇ ಖ್ಯಾತಿ ಹೊಂದಿರುವ ಮುಹಿಯುದ್ದೀನ್ ಜುಮಾ ಮಸೀದಿಯ ಕಾಮಗಾರಿ 2012ರಲ್ಲಿ ಪೂರ್ಣಗೊಂಡಿದ್ದು, 650 ಕುಟುಂಬಗಳನ್ನು ಒಳಗೊಂಡಿದೆ. 2013ರಲ್ಲಿ ಜುಮಾ ಆರಂಭಿಸಲಾಗಿದೆ. ಪ್ರಸ್ತುತ ಮಸೀದಿಯ ಅಧೀನದಲ್ಲಿ 400 ವಿದ್ಯಾರ್ಥಿಗಳನ್ನು ಹೊಂದಿರುವ ಖಂಝುಲ್ ಉಲೂಂ ಮದ್ರಸ , ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರ ಹಾಗೂ ಹಿರಿಯ ಮಹಿಳೆಯರಿಗೆ ಧಾರ್ಮಿಕ ಬೋಧನಾ ಕೇಂದ್ರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಣ್ಮಕ್ಕಳಿಗೆ ಮಹಿಳಾ ಶಿಕ್ಷಕರಿಂದ ಧಾರ್ಮಿಕ ಶಿಕ್ಷಣ, ಮಹಿಳಾ ಆಲಿಂ ಕೋರ್ಸ್, ಅರ್ಹ ಹೆಣ್ಮಕ್ಕಳ ವಿವಾಹಕ್ಕೆ ನೆರವು, ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ರೋಗಿಗಳಿಗೆ ವೈದ್ಯಕೀಯ ನೆರವು ನೀಡುವ ಯೋಜನೆ ಇದಾಗಿದೆ ಎಂದು ಫಾರೂಕ್ ಉಳ್ಳಾಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಮಾಜಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪದಾಧಿಕಾರಿಗಳಾದ ಬಶೀರ್ ಗುಂಡಿಹಿತ್ಲು, ರಝಾಕ್ ಹರೇಕಳ, ಬಶೀರ್ ಇಲ್ಯಾಸ್, ಅಬ್ದುಲ್ ರಹೀಂ ಮುಟ್ಟಿಕ್ಕಲ್, ಅಬ್ದುಲ್ ಲತೀಫ್, ಅಬ್ದುಲ್ ಜಬ್ಬಾರ್, ಆಸಿಫ್ ಅಬ್ದುಲ್ಲಾ, ಬಾವಾ ಫಕೀರ್ ಸಾಬ್, ಜಮಾಲ್ ಬಾರ್ಲಿ ಹಾಗೂ ಸಲಾಂ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News