ದ.ಕ. ಜಿಲ್ಲಾ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಸಮಾರೋಪ

Update: 2017-04-25 17:52 GMT

ಮಂಗಳೂರು, ಎ.25: ಜಿಲ್ಲಾ ಜಂ-ಇಯ್ಯತುಲ್ ಮುಅಲ್ಲಿಮೀನ್, ಕುಂಡೂರು ಕೇಂದ್ರ ಜುಮಾ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅಂಬ್ಲಮೊಗರು ಪರಿಯಕ್ಕಳ ಹಿಮಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸದಲ್ಲಿ ನಡೆದ 14ನೆ ವರ್ಷದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ಹಾಗೂ ಜಿಲ್ಲಾ ಮಟ್ಟದ ಮದ್ರಸಗಳ ಮುಅಲ್ಲಿಂ, ವಿದ್ಯಾರ್ಥಿ ಫೆಸ್ಟ್-2017 ಸಮಾಪನಗೊಂಡಿತು.

ಅಝಾನ್, ಗುಂಪು ಹಾಡು, ಚಿತ್ರ ರಚನೆ, ಕಿರಾಅತ್ ಪಠಣ, ಹಿಫ್ಳ್, ವಿವಿಧ ಭಾಷೆಗಳಲ್ಲಿ ಭಾಷಣ, ಪದ ಸ್ಪರ್ಧೆ, ಕಥಾ ಪ್ರಸಂಗ, ಕ್ವಿಝ್, ಪ್ರಬಂಧ, ಜ್ಞಾಪಕ ಶಕ್ತಿ ಪರೀಕ್ಷೆ, ಹಾಡುಗಾರಿಕೆ, ಕೈಬರಹ ಸಹಿತ 20 ವಿಭಾಗದಲ್ಲಿ ನಡೆದ ಸ್ಪರ್ಧೆಗಳಲ್ಲಿ ಮಂಗಳೂರು ದಕ್ಷಿಣ ರೇಂಜ್ ವಿಭಾಗ ಸಮಗ್ರ ಪ್ರಶಸ್ತಿ ಪಡೆದರೆ, ಉಪ್ಪಿನಂಗಡಿ ವಿಭಾಗ ರನ್ನರ್ಸ್‌ ಆಯಿತು. ಎರಡು ದಿನ ನಡೆದ ಸ್ಪರ್ಧೆಯಲ್ಲಿ 20 ರೇಂಜ್‌ಗಳಿಂದ 1,250 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉದ್ಘಾಟನೆ ಪ್ರಯುಕ್ತ ಅಸೈಯದ್ ಮುಹಮ್ಮದ್ ರಿಫಾಯಿ ಅಲ್‌ಬುಖಾರಿ ದರ್ಗಾ ಝಿಯಾರತ್‌ಗೆ ಮತ್ತು ಕಿನ್ಯ ಸಂಶುಲ್ ಉಲಮಾ ದಾರುಸ್ಸಲಾಂ ಅಕಾಡಮಿ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವ ವಹಿಸಿದ್ದರು. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.

ಜಂ-ಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ.ಎಲ್.ಉಮ್ಮರ್ ದಾರಿಮಿ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು. ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸಹಿತ ವಿವಿಧ ಗಣ್ಯರು ಭಾಗವಹಿಸಿದ್ದರು. ಜಂ-ಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಸಂಶುದ್ದೀನ್ ದಾರಿಮಿ ಕುಂಬ್ರ ಸ್ವಾಗತಿಸಿದರು. ಮುಹಮ್ಮದ್ ಅರ್ಷದ್ ಕಿರಾಅತ್ ಪಠಿಸಿದರು. ಕುಂಡೂರು ಮಸೀದಿಯ ಖತೀಬ್ ಅಬ್ದುಲ್ ರಶೀದ್ ಯಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಮಟ್ಟದ ಎಸ್ಕೆಎಸ್‌ಬಿವಿ ತಝ್‌ಕಿಯತ್ ಕ್ಯಾಂಪ್‌ನಲ್ಲಿ ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ಸ್ವದಕತ್ತುಲ್ಲಾ ಫೈಝಿ ಮುಖ್ಯ ಭಾಷಣ ಮಾಡಿದರು.ಕಿನ್ಯ ದಾರುಸ್ಸಲಾಂ ಅಕಾಡಮಿಯ ಪ್ರಾಂಶುಪಾಲ ಕೆ.ಎಂ.ಖಾಸಿಂ ದಾರಿಮಿ ‘ಅಲ್ಲಾಹನೆಡಿಗೆ ಧಾವಿಸೋಣ’ ಎನ್ನುವ ವಿಷಯ ಮಂಡಿಸಿದರು. ಜಿಲ್ಲಾ ಸಮಸ್ತ ಮುಶಾವರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಹಾಗೂ ತಹ್‌ಲೀಲ್ ಸಮರ್ಪಣೆಗೆ ನೇತೃತ್ವ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್ ಬಹುಮಾನ ವಿತರಿಸಿದರು. ಅಸೈಯದ್ ನಜ್‌ಮುದ್ದೀನ್ ಪೂಕೋಯ ತಂಙಳ್ ಅಲ್ ಹೈದ್ರೋಸಿ ದುಆ ಮಾಡಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು. ಜಿಲ್ಲಾ ಸಮಸ್ತ ಮುಶಾವರ ಅಧ್ಯಕ್ಷ ಎನ್.ಪಿ.ಎಂ.ಝೈನುಲ್ ಅಬಿದೀನ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯ ಸದಸ್ಯ ಅನೀಸ್ ಕೌಸರಿ ಮುಖ್ಯ ಭಾಷಣ ಮಾಡಿದರು. ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ರಫೀಕ್ ಅಭಿನಂದನಾ ಭಾಷಣ ಮಾಡಿದರು. ಜಂ-ಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಸ್ವಾಗತಿಸಿದರು. ನುಸ್ರತುಲ್ ಇಸ್ಲಾಂ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಲೀಂ ಅಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News