​ಮಿಲಾಗ್ರಿಸ್ ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿಗಳಿಗೆ ಪುರಸ್ಕಾರ

Update: 2017-04-25 18:09 GMT

ಕಲ್ಯಾಣಪುರ, ಎ.25: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ವರ್ಣ ಮಹೋತ್ಸವ ಸ್ಮಾರಕ ಶ್ರೇಷ್ಟ ವಿದ್ಯಾರ್ಥಿ ಪುರಸ್ಕಾರವನ್ನು ಇತ್ತೀಚೆಗೆ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾಲೇಜಿನ ಹಳೆ ವಿದ್ಯಾರ್ಥಿ ಆಲ್ಪ್ರೆಡ್ ಕ್ರಾಸ್ಟೊ ಅವರ ಪ್ರಾಯೋಜಕತ್ವದಲ್ಲಿ ಕಾಲೇಜು ಜೀವನದ ಮೂರು ವರ್ಷಗಳಲ್ಲಿ ತೋರಿದ ಸಾಧನೆ ಮೇಲೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ವಿಜೇತರಿಗೆ 50 ಸಾವಿರ ರೂ., ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಗುತ್ತದೆ.

ಅಂತಿಮ ಬಿ.ಎ. ವಿದ್ಯಾರ್ಥಿ ರೊಸಾಲಿಯಾ ಕಾರ್ಡೊಜಾ, ಅಂತಿಮ ಬಿ.ಕಾಂನ ಬಿ.ಎ. ಸುಷ್ಮಾ, ಅಂತಿಮ ಬಿ.ಕಾಂನ ಜೊಹಾನ್ ಲುವಿಸ್ ಹಾಗೂ ಅಂತಿಮ ಬಿ.ಎಸ್ಸಿಯ ಬ್ಲೆನ್ಸಿಲ್ ಲುವಿಸ್ ಇವರಿಗೆ ವಂ. ಡೆನಿಸ್ ಡೇಸಾ 2017ನೇ ಸಾಲಿನ ಪುರಸ್ಕಾರವನ್ನು ನೀಡಿದರು.

ಕಾಲೇಜಿನ ಸಂಚಾಲಕ ವಂ.ಸ್ಟ್ಯಾನಿ ಬಿ.ಲೋಬೊ, ಪ್ರಾಂಶುಪಾಲ ಡಾ. ಜೆರಾಲ್ಡ್ ಪಿಂಟೊ, ಕ್ಯಾಂಪಸ್ ನಿರ್ದೆಶಕ ರೆ.ಡಾ.ಅನಿಲ್ ಪ್ರಕಾಶ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News