ಮೇ 1ರಿಂದ ಎ.ಜೆ. ಆಸ್ಪತ್ರೆಯಲ್ಲಿ ‘ಸೌಂದರ್ಯ’ ಪ್ಲಾಸ್ಟಿಕ್ ಸರ್ಜರಿ ಶಿಬಿರ

Update: 2017-04-25 18:28 GMT

 ಮಂಗಳೂರು, ಎ.25: ಜನರಲ್ಲಿ ಬೆಳೆಯುತ್ತಿರುವ ಆರೋಗ್ಯ ಹಾಗೂ ಸೌಂದರ್ಯ ಪ್ರಜ್ಞೆಯನ್ನು ಗಮನದಲ್ಲಿರಿಸಿಕೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯು ‘ಸೌಂದರ್ಯ’ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಮೇ 1ರಿಂದ 15ರವರೆಗೆ ಹಮ್ಮಿಕೊಂಡಿದೆ. ಉಚಿತ ಸ್ಕ್ರೀನಿಂಗ್ ಸಮಾಲೋಚನಾ ಶಿಬಿರವು ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ತನಕ ನಡೆಯಲಿದ್ದು ಶಿಬಿರದಲ್ಲಿ ಭಾಗವಹಿಸುವವರಿಗೆ ನೋಂದಣಿ ಮತ್ತು ಸಲಹೆ-ಸೂಚನೆ ಉಚಿತವಾಗಿದೆ. ಹೆಚ್ಚಿನ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು. ಕಾಸ್ಮೆಟಿಕ್ ಸರ್ಜರಿಗಳಾದ ಕೊಬ್ಬು ಹೀರುವುದು (ಲೈಪೋಸಕ್ಷನ್), ಟಮ್ಮಿಟಕ್ (ಕಿಬ್ಬೊಟ್ಟೆಯ ಬೊಜ್ಜುತೆಗೆಯುವುದು), ರ್ಹಿನೋಪ್ಲಾಸ್ಟಿ (ಮೂಗು ಪುನರ್‌ರೂಪಣೆ), ಸ್ತನಗಳ ಇಂಪ್ಲಾಂಟ್ ಹಾಗೂ ಪುನರ್‌ರೂಪಣೆ, ಮುಖದ ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಗಳು, ಬೋಳು ತಲೆಗೆ ಕೂದಲು ಕಸಿ, ಸುಕ್ಕು ಮುಖಕ್ಕೆ ಬೊಟೊಕ್ಸ್ ಚಿಕಿತ್ಸೆ ಇತ್ಯಾದಿ ಸೌಂದರ್ಯವರ್ಧಕ ಚಿಕಿತ್ಸೆಗಳನ್ನು ಮಾಡಲಾಗುವುದು.ಹೆಸರು ನೋಂದಣಿಗಾಗಿ ದೂ.ಸಂ.: 0824-6613252, 8494890600ಗೆ ಬೆಳಗ್ಗೆ 9ರಿಂದ ಸಂಜೆ 5ರೊಳಗೆ ಕರೆಮಾಡಿ ಅಥವಾ ಇಮೇಲ್:ajhospitalmarketing@gmail.com ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News