ನಾಳೆ ಸಾಧಕರ ಯಶೋಗಾಥೆಯ ‘ಹೆಜ್ಜೆ ಗುರುತು’

Update: 2017-04-25 18:44 GMT

ಉಡುಪಿ, ಎ.25: ‘ಬೀಯಿಂಗ್ ಸೋಶಿಯಲ್’ ತಂಡ, ನಾಡಿನ ಸಾಧಕರ ಯಶೋಗಾಥೆಯನ್ನು ಅವರ ಮೂಲಕವೇ ತಿಳಿದುಕೊಳ್ಳುವ ‘ಹೆಜ್ಜೆಗುರುತು’ ಕಾರ್ಯಕ್ರಮವನ್ನು ಎ.27 ರಂದು ಪ್ರಾರಂಭಿಸಲಿದೆ ಎಂದು ಸಂಘಟನೆಯ ನಿರ್ವಾಹಕ ಅವಿನಾಶ್ ಕಾಮತ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎ.27ರಂದು ಸಂಜೆ 5:20ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ಮೊದಲ ಅತಿಥಿ ಆ್ಯಸಿಡ್ ದಾಳಿಗೆ ತುತ್ತಾಗಿರುವ ಮೈಸೂರು ಮೆಲ್ಲನಹಳ್ಳಿಯ ಡಾ.ಮಹಾಲಕ್ಷ್ಮಿ ವೈ. ಎನ್. ತನ್ನ ಯಶೋಗಾಥೆಯನ್ನು ಸಭಿಕರ ಮುಂದಿಡಲಿದ್ದಾರೆ ಎಂದು ಹೇಳಿದರು.

ಆ್ಯಸಿಡ್ ದಾಳಿಗೆ ತುತ್ತಾದವರಿಗೆ ಸರಕಾರ ನೀಡುವ ವಿವಿಧ ಸೌಲಭ್ಯಗಳ ಕುರಿತು ಅವರು ವಿವರಿಸಲಿದ್ದಾರೆ. ಈ ಸಂದರ್ಭ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಗುವುದು ಎಂದು ಅವಿನಾಶ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೀಯಿಂಗ್ ಸೋಶಿ ಯಲ್‌ನ ಜೋಯಲ್ ಸೋನ್ಸ್, ದಿವ್ಯಾ ಹೆಗಡೆ, ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News