×
Ad

ಈಜಿಪ್ಟ್ ನ ಇಮಾನ್ ಚಿಕಿತ್ಸೆಯಿಂದ ಹಿಂದೆ ಸರಿದ ಮುಂಬೈ ವೈದ್ಯರು!

Update: 2017-04-26 12:19 IST

ಮುಂಬೈ, ಎ. 27: ಜಗತ್ತಿನ ಅತ್ಯಂತ ಭಾರದ ಮಹಿಳೆ ಇಮಾನ್ ಅಹ್ಮದ್‌ರ ಚಿಕಿತ್ಸೆಯಿಂದ ವೈದ್ಯರು ಹಿಂದೆ ಸರಿದಿದ್ದಾರೆ. ಸೈಫಿ ಆಸ್ಪತ್ರೆಯಲ್ಲಿ ಇಮಾನ್‌ರಿಗೆ ಚಿಕಿತ್ಸೆ ನೀಡುತ್ತಿದ್ದ 13 ಮಂದಿಯಲ್ಲಿ 12 ಮಂದಿ ಹಿಂದೆಸರಿದಿದ್ದಾರೆ. ಇಮಾನ್‌ರ ಸಹೋದರಿ ಫೇಸ್‌ಬುಕ್‌ನ ಲ್ಲಿ ವೈದ್ಯರ ಚಿಕಿತ್ಸೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು ಇದಕ್ಕೆ ಕಾರಣ ಎಂದು ಸೂಚನೆ ಲಭಿಸಿದೆ. ಇಮಾನ್‌ರ ಭಾರ ಕಡಿಮೆಯಾಗಿದೆಎನ್ನುವ ಆಸ್ಪತ್ರೆಯ ವೈದ್ಯರ ಹೇಳಿಕೆಗಳು ತಪ್ಪು. ನಮ್ಮನ್ನು ವಂಚಿಸುವಂತಹದ್ದು ಎಂದು ಇಮಾನ್ ಸಹೋದರಿ ಶೈಮಾ ಸಲೀಂ ಮಂಗಳವಾರ ಆರೋಪಿಸಿ ವೀಡಿಯೊ ಹಾಕಿದ್ದರು.

ತಮ್ಮಚಿಕಿತ್ಸೆಯಿಂದ ಇಮಾನ್‌ರ ದೇಹ ತೂಕ ತುಂಬ ಕಡಿಮೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು. ಆದರೆ ಇಮಾನ್ ಈಗಲೂ 240 ಕೆಜಿ ಭಾರವನ್ನು ಹೊಂದಿದ್ದಾರೆ ಎಂದು ಶೈಮಾ ಸಲೀಂ ಆರೋಪಿಸಿದ್ದಾರೆ. ಕಳೆದ ದಿವಸ ಅವರು ಒಂದು ವೀಡಿಯೊ ಪೋಸ್ಟ್ ಮಾಡಿ ಶೈಮಾ ಆರೋಪ ಹೊರಿಸಿದ್ದರು.

 ಇದು ಇಮಾನ್‌ರ ಡಿಸ್ಚಾರ್ಜ್‌ನ್ನು ತಡಮಾಡಲು ಕುಟುಂಬ ಹೂಡಿದ ತಂತ್ರ ಎಂದು ಆಸ್ಪತ್ರೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು. ಈಜಿಪ್ಟ್‌ನಲ್ಲಿ ಸೂಕ್ತ ಚಿಕಿತ್ಸಾ ಸೌಕರ್ಯಗಳಿಲ್ಲ. ಆದ್ದರಿಂದ ಡಿಸ್ಚಾರ್ಜ್‌ನ್ನು ತಡಮಾಡುವುದಕ್ಕಾಗಿ ವಿವಾದವನ್ನು ಹುಟ್ಟುಹಾಕಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಆರೋಪಿಸಿದ್ದರು. ಚಿಕಿತ್ಸೆ ಆರಂಭವಾದ ನಂತರ ಇಮಾನ್‌ರ ಭಾರ 151ಕೆಜಿಗೆ ತಲುಪಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News