×
Ad

ಬಾಂಗ್ಲಾದೇಶಕ್ಕೆ ಅಕ್ರಮ ಜಾನುವಾರು ಸಾಗಾಣಿಕೆಗಾಗಿ ಸುರಂಗ ಮಾರ್ಗ...!

Update: 2017-04-26 14:07 IST

ಕಿಶನಗಂಜ್(ಬಿಹಾರ),ಎ.26: ಕಿಶನಗಂಜ್‌ಗೆ ಹೊಂದಿಕೊಂಡಿರುವ ಉತ್ತರ ಬಂಗಾಲದ ಚೋಪ್ರಾ-ಫತೇಪುರ ಗಡಿ ಹೊರಠಾಣೆಯ ಬಳಿ ಚಹಾ ತೋಟವೊಂದರ ಮೂಲಕ ಅಕ್ರಮ ಜಾನುವಾರು ಸಾಗಾಟಗಾರರು ತೋಡಿರುವ 80 ಮೀ.ಉದ್ದದ ಸುರಂಗ ಮಾರ್ಗವೊಂದನ್ನು ಬಿಎಸ್‌ಎಫ್ ಪತ್ತೆ ಹಚ್ಚಿದೆ.

 ಗಡಿಯಲ್ಲಿ ಬೇಲಿ ನಿರ್ಮಾಣದಿಂದ ಬಾಂಗ್ಲಾದೇಶಕ್ಕೆ ಜಾನುವಾರುಗಳ ಕಳ್ಳಸಾಗಾಣಿಕೆಗೆ ಸಮಸ್ಯೆಯಾಗಿರುವುದರಿಂದ ಕಳ್ಳಸಾಗಾಟಗಾರರು ಬೇಲಿಯ ಕೆಳಗಿನಿಂದ ಸುರಂಗ ಮಾರ್ಗವನ್ನು ತೋಡುತ್ತಿದ್ದರು ಎಂದು ಬಿಎಸ್‌ಎಫ್‌ನ ಉಪ ಮಹಾ ನಿರ್ದೇಶಕ ದೇವಿಶರಣ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಳ್ಳ ಸಾಗಾಣಿಕೆದಾರರು ಸುದೀರ್ಘ ಕಾಲದಿಂದ ರಾತ್ರಿಯ ವೇಳೆ ಚಹಾತೋಟದ ಮೂಲಕ ಸುರಂಗವನ್ನು ತೋಡುತ್ತಿದ್ದರು ಎಂದ ಅವರು, ಸುರಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಗಡಿಯಲ್ಲಿ ಗಸ್ತನ್ನು ಹೆಚ್ಚಿಸಿದೆ ಎಂದರು.

ಬಾಂಗ್ಲಾದೇಶ ಮತ್ತು ಭಾರತ 4.096 ಕಿ.ಮೀ.ಉದ್ದದ ಗಡಿಯನ್ನು ಹಂಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News