×
Ad

ವಿದರ್ಭದಲ್ಲಿ ಲಘು ವಿಮಾನ ಪತನ; 2 ಸಾವು

Update: 2017-04-26 14:49 IST

ಮುಂಬೈ, ಎ.26: ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿರುವ ವೈನಗಂಗಾ ನದಿಗೆ ತಾಂತ್ರಿಕ ಸಮಸ್ಯೆಯಿಂದ ಲಘು ವಿಮಾನವೊಂದು ಪತನಗೊಂಡ ಪರಿಣಾಮವಾಗಿ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಗೊಂಡಿಯಾದ ರಾಷ್ಟ್ರೀಯ ವಿಮಾನ ಹಾರಾಟ ತರಬೇತಿ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡ ಪರಿಣಾಮವಾಗಿ ವಿಮಾನದಲ್ಲಿದ್ದ ತರಬೇತಿದಾರ ಕ್ಯಾಪ್ಟನ್ ರಾಜನ್ ಗುಪ್ತಾ ಮತ್ತು ಟ್ರೈನಿ ಹಿಮಾಶ್ರೀ   ಮೃತಪಟ್ಟಿರುವುದಾಗಿ ಗೊಂಡಿಯಾದ ಜಿಲ್ಲಾಧಿಕಾರಿ ಅಭಿಮನ್ಯು ಕಾಳೆ ಮಾಹಿತಿ ನೀಡಿದ್ದಾರೆ.

ನಾಲ್ಕು ಆಸನಗಳ ಸಾಮರ್ಥ್ಯದ ಲಘು ವಿಮಾನದಲ್ಲಿ  ಇಬ್ಬರು ಪ್ರಯಾಣಿಸುತ್ತಿದ್ದರು. ಅದಾನಿ ಕಲ್ಲಿದ್ದಲು ಆಧಾರಿತ ಅದಾನಿ ವಿದ್ಯುತ್ ಸ್ಥಾವರದ ಪಕ್ಕದಲ್ಲೇ ವಿಮಾನ ದುರಂತ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News