ವಿದೇಶಿ ಸ್ಮಾರ್ಟ್‌ಫೋನ್‌ಗಳಿಗೆ ತೆರಿಗೆ !
Update: 2017-04-26 15:11 IST
ಹೊಸದಿಲ್ಲಿ,ಎ. 26: ಸ್ಥಳೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದೇಶಗಳಿಂದ ತರಿಸಿಕೊಳ್ಳುವ ಮೊಬೈಲ್ ಫೋನ್‌ಗಳಿಗೆ ಸುಂಕ ವಿಧಿಸಲು ಕೇಂದ್ರಸರಕಾರ ನಿರ್ಧರಿಸಿದೆ. ಸರಕುಸೇವಾ ತೆರಿಗೆಜಾರಿಗೊಂಡ ಬಳಿಕ ಆಮದು ಸುಂಕ ವಿಧಿಸಲಾಗುವುದು. ಆನಂತರ ಚೀನಾದ ಸ್ಮಾರ್ಟ್ ಫೋನ್‌ಗಳು, ಆ್ಯಪಲ್ ಐ ಫೋನ್‌ಗಳ ಬೆಲೆಯಲ್ಲಿ ಶೇ. 5-10ರವರೆಗೆ ಬೆಲೆಹೆಚ್ಚಳವಾಗಲಿದೆ.
ಇಲೆಕ್ಟ್ರಾನಿಕ್, ಐಟಿ ಸಚಿವಾಲಯ ಇದಕ್ಕೆ ಸಂಬಂಧಿಸಿದ ಕಾನೂನು ಸಲಹೆ ಕೇಳಿದೆ. ಅಂತಾರಾಷ್ಟ್ರ ಮಟ್ಟದ ಇನ್ಫಾರ್ಮೇಶನ್ ಟೆಕ್ನಾಲಜಿ ಎಗ್ರಿಮೆಂಟ್ ಆಮದು ಸುಂಕಕ್ಕೆ ಅಡ್ಡಿಯಾಗಲಿದೆಯೇ ಎಂದು ಈಗ ಪರಿಶೀಲಿಸಲಾಗುತ್ತಿದೆ.