×
Ad

ಅಮೆಮಾರ್ ಮಸೀದಿ ವಸತಿ ಸಮುಚ್ಛಯಕ್ಕೆ ಶಿಲಾನ್ಯಾಸ

Update: 2017-04-26 17:24 IST

ಫರಂಗಿಪೇಟೆ, ಎ.26: ಅಮೆಮಾರ್  ಬದ್ರಿಯಾ ಮದ್ರಸ ಮತ್ತು ಜುಮಾ ಮಸೀದಿ ವಸತಿ ಸಮುಚ್ಛಯ ಕಟ್ಟಡದ ಶಿಲಾನ್ಯಾಸವನ್ನು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕೇಂದ್ರ ಮುಶಾವರ ಸಮಿತಿಯ ಉಪಾಧ್ಯಕ್ಷ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ನೆರವೇರಿಸಿದರು

ಈ ಸಂದರ್ಭದಲ್ಲಿ ಮಸೀದಿಯ ಖತೀಬರಾದ ಅಹೂಸ್ವಾಲಿಹ್ ಫೈಝಿ, ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ., ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಮುಸ್ಲಿಯಾರ್, ಉಪಾಧ್ಯಕ್ಷ ಸಿದ್ದೀಕ್ ಎಂ.ಎಸ್., ಕೋಶಾಧಿಕಾರಿ  ಮುಸ್ತಫಾ,  ಸಮಿತಿ ಸದಸ್ಯರಾದ ಉಮರಬ್ಬ, ಹಮೀದ್, ಸುಲೈಮಾನ್ ಉಸ್ತಾದ್, ಜಮಾಲ್, ಇಬ್ರಾಹೀಂ, ಹಾರಿಸ್, ಮದ್ರಸ ಅಧ್ಯಾಪಕರಾದ ಇಲ್ಯಾಸ್ ಮದನಿ, ಇಸ್ಹಾಕ್ ಅರ್ಶದಿ, ರಝಾಕ್ ಅರ್ಶದಿ, ಅಬೂಬಕ್ಕರ್ ಮದನಿ, ಸುಲೈಮಾನ್ ಮುಸ್ಲಿಯಾರ್ ಮತ್ತು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News