ದಿಲ್ಲಿ ಎಂಸಿಡಿಯಲ್ಲಿ ಮತ್ತೆ ಬಿಜೆಪಿ ದರ್ಬಾರ್

Update: 2017-04-26 12:34 GMT
ಗ್ರಾಫಿಕ್ ಚಿತ್ರ ಕೃಪೆ: ಫೈನಾನ್ಶಿಯಲ್  ಎಕ್ಸ್ ಪ್ರೆಸ್

ಹೊಸದಿಲ್ಲಿ, ಎ.26: ದಿಲ್ಲಿಯ  ಮೂರು ಮಹಾನಗರ ಪಾಲಿಕೆಗಳ 270 ಸ್ಥಾನಗಳಿಗೆ ನಡೆದ   ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ  ಮತ್ತೆ ಐದು ವರ್ಷಗಳ ಕಾಲ ಆಡಳಿತ ನಡೆಸುವ ಅವಕಾಶ ಗಿಟ್ಟಿಸಿಕೊಂಡಿದೆ.

ಒಟ್ಟು 272 ಕ್ಷೇತ್ರಗಳ ಪೈಕಿ 270 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 270 ಸ್ಥಾನಗಳಿಗೆ  ಚುನಾವಣೆಯಲ್ಲಿ ಬಿಜೆಪಿ 184, ಆಪ್ 47 , ಕಾಂಗ್ರೆಸ್ 30 ಮತ್ತು  10 ಕ್ಷೇತ್ರಗಳಲ್ಲಿ ಪಕ್ಷೇತರರು ಸೇರಿದಂತೆ ಇತರ  ಪಕ್ಷಗಳು ಜಯ ಗಳಿಸಿವೆ.

ಆಡಳಿತದ ಚುಕ್ಕಾಣಿ ಹಿಡಿಯಲು 137 ಸ್ಥಾನಗಳನ್ನು ಪಡೆಯಬೇಕಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರವನ್ನು ಉಳಿಸಿಕೊಂಡಿದೆ.

 2012ರ ಚುನಾವಣೆಯಲ್ಲಿ ಆಪ್ ಕಣದಲ್ಲಿರಲಿಲ್ಲ. ಬಿಜೆಪಿ 138 ಸ್ಥಾನಗಳನ್ನು ಗೆದ್ದುಕೊಂಡು ಸತತ ಎರಡನೆ ಬಾರಿ ಅಧಿಕಾರ ಪಡೆದಿತ್ತು.ಕಾಂಗ್ರೆಸ್ 77 ಮತ್ತು 57 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಜಯ ಗಳಿಸಿತ್ತು. ಕಾಂಗ್ರೆಸ್ ನ ಪ್ರಾಬಲ್ಯ ಈ ಬಾರಿ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News