×
Ad

ಮಂಗಳೂರು: ಕಟ್ಟಡದ 6ನೆ ಮಹಡಿಯಿಂದ ಹಾರಿ ​ಹೊಟೇಲ್ ಸಿಬ್ಬಂದಿ ಆತ್ಮಹತ್ಯೆ

Update: 2017-04-26 18:14 IST

ಮಂಗಳೂರು, ಎ. 26: ನಗರದ ಖಾಸಗಿ ಇಂಟರ್ ನ್ಯಾಷನಲ್ ಹೊಟೇಲ್‌ನ ಸಿಬ್ಬಂದಿಯೋರ್ವ ಕಟ್ಟಡದ ಆರನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಪಂಪ್‌ವೆಲ್ ನಿವಾಸಿ ನಿಹಾಲ್ ಭಂಡಾರಿ (23) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ರಿಸಿಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿಹಾಲ್ ಕೆಲಸ ಮಾಡುತ್ತಿದ್ದ ಹೊಟೇಲ್‌ನ ಲೆಕ್ಕಪತ್ರಗಳಲ್ಲಿ ತಪ್ಪು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಿಸಲಾಗಿತ್ತು. ಇದರಿಂದ ನೊಂದ ಅವರು ಆರನೆ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕದ್ರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News