ಎ.27: ಶೇಖ್ ಮಕ್ಸೂದುಲ್ ಹಸನ್ ಫೈಝಿ ಉಡುಪಿಗೆ
ಉಡುಪಿ, ಎ.26: ಉಡುಪಿ ಇಸ್ಲಾಮಿಕ್ ದಾವ ಸೆಂಟರ್ ವತಿಯಿಂದ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಮಾರ್ಗದರ್ಶನದಲ್ಲಿ ಉಡುಪಿ ಅಲ್‌ಹಿಕ್ಮಾ ಸೆಂಟರ್ ಹಾಗೂ ಮಲ್ಪೆ ಕಲೇಮಾ ಸೆಂಟರ್‌ನ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯಾದ್ಯಂತ ಎ.27ರಿಂದ 30ರವರೆಗೆ ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೌದಿ ಅರೇಬಿಯಾದ ಮುಕ್ತಬಾ ಅಲ್ ಜಾಲಿಯಾತ್, ಅಲ್‌ಗಾತ್ ಖ್ಯಾತ ಇಸ್ಲಾಮಿ ಹಿರಿಯ ವಿದ್ವಾಂಸ ಶೇಖ್ ಮಕ್ಸೂದುಲ್ ಹಸನ್ ಫೈಝಿ ಭಾಗವಹಿಸಲಿದ್ದಾರೆ.
27ರಂದು ಹೊನ್ನಾಳದ ಮುಹ್ಮದೀ ಮಸೀದಿಯಲ್ಲಿ ಮಗ್ರಿಬ್ ನಮಾಝ್ ಬಳಿಕ ‘ಮುಸಲ್ಮಾನೋ ಕಿ ಝಿಂದಗಿ ಮೆ ಕುರಾನ್ ಕಿ ಅಹಮಿ ಯತ್’ ಕುರಿತು ಪ್ರವಚನ, 28ರಂದು ಹೂಡೆ ಮಸ್ಜಿದ್ ಎ ಮುಆವಿಯಾ ಬಿನ್ ಅಬೀ ಸುಫ್ಯಾನ್‌ನಲ್ಲಿ ಜುಮಾ ಖುತ್ಬಾ, ಇಶಾ ನಮಾಝ್ ನಂತರ ಶಿರೂರಿನ ಮುಹ್ಮದೀ ಮಸೀದಿಯಲ್ಲಿ ಪ್ರವಚನ, 29ರಂದು ಮಲ್ಪೆ ಅಬೂ ಸಯ್ಯದಿನಾ ಬಕರ್ ಸಿದ್ಧಿಕ್ ಮಸೀದಿಯಲ್ಲಿ ಮಗ್ರೀಬ್ ನಮಾಝ್ ನಂತರ ‘ಹಝ್ರತ್ ನೂಹ್(ಅ) ಕಿ ವಸೀಯತ್’ ಕುರಿತು ಪ್ರವಚನ ನೀಡಲಿರುವರು.
30ರಂದು ಬೆಳಗ್ಗೆ 9:30ಕ್ಕೆ ಉಡುಪಿ ಇಸ್ಲಾಮಿಕ್ ದಾವ ಸೆಂಟರ್‌ನಲ್ಲಿ ‘ದೀಲೋ ಕಿ ಇಸ್ಲಾಹ್’ ಕುರಿತು ಕಾರ್ಯಾಗಾರ, ಸಂಜೆ 5 ಗಂಟೆಗೆ ಉದ್ಯಾವರ ಅಹ್ಲೆ ಹದೀಸ್ ಮಸೀದಿಯಲ್ಲಿ ‘ರಾಹೆ ನಜಾತ್’ ಶಿರ್ಷಿಕೆಯಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನೀಡಲಿರುವರು. ಇವರೊಂದಿಗೆ ಸೌದಿ ಅರೇಬಿಯಾದ ಯಾಂಬೊ ಜಾಲಿಯತ್‌ನ ದಾಯಿ ಶೇಕ್ ಅಬ್ದುರ್ರಹಮಾನ್ ಉಸ್ಮಾನಿ ಭಾಗ ವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.